ಕರಾಚಿ: ‘ನನ್ನ ಮೇಲಿನ ಆಜೀವ ನಿಷೇಧವನ್ನು ಹಿಂದಕ್ಕೆ ಪಡೆದು ದೇಶಿಯ ಟೂರ್ನಿಗಳಲ್ಲಿ ಆಡಲು ಅವಕಾಶ ಮಾಡಿಕೊಡಿ’ ಎಂದು ಹಿರಿಯ ಕ್ರಿಕೆಟಿಗ ದಾನಿಶ್ ಕನೇರಿಯಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಮನವಿ ಮಾಡಿದ್ದಾರೆ.

ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದು ಸಾಬೀತಾದ ಕಾರಣ ಪಿಸಿಬಿ, 2013ರಲ್ಲಿ ಕನೇರಿಯಾ ಮೇಲೆ ಆಜೀವ ನಿಷೇಧ ಹೇರಿತ್ತು.

‘ನನಗೆ ಕ್ರಿಕೆಟ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಕ್ರಿಕೆಟ್‌ನಿಂದಲೇ ಬದುಕು ರೂಪಿಸಿಕೊಂಡಿದ್ದೇನೆ. ಮೊಹಮ್ಮದ್ ಆಮೀರ್, ಸಲ್ಮಾನ್ ಬಟ್ ಸೇರಿದಂತೆ ಅನೇಕ ಕ್ರಿಕೆಟಿಗರೂ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದರು. ಶಿಕ್ಷೆ ಪೂರ್ಣಗೊಳಿಸಿದ ಬಳಿಕ ಅವರಿಗೆ ಕ್ರಿಕೆಟ್ ಆಡಲು ಅವಕಾಶ ನೀಡಲಾಗಿದೆ. ಆದರೆ ನನಗೆ ಅವಕಾಶ ಕೊಡದಿರುವುದು ಯಾವ ನ್ಯಾಯ’ ಎಂದು ಕನೇರಿಯಾ, ಹಲವು ಬಾರಿ ಪಿಸಿಬಿಯನ್ನು ಪ್ರಶ್ನಿಸಿದ್ದರು.

ಪಿಸಿಬಿ ಮುಖ್ಯಸ್ಥ ಎಹಸಾನ್ ಮಣಿ ಅವರಿಗೆ ಸೋಮವಾರ ಬರೆದಿರುವ ಪತ್ರದಲ್ಲೂ ಅವರು ಈ ಅಂಶವನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

39 ವರ್ಷ ವಯಸ್ಸಿನ ಕನೇರಿಯಾ, ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದಿರುವ ಪಾಕಿಸ್ತಾನದ ಬೌಲರ್ ಎಂಬ ಹಿರಿಮೆ ಹೊಂದಿದ್ದಾರೆ.

61 ಪಂದ್ಯಗಳನ್ನು ಆಡಿರುವ ಅವರು 34.79ರ ಸರಾಸರಿಯಲ್ಲಿ 261 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2000ರಿಂದ 2010ರ ಅವಧಿಯಲ್ಲಿ ಪಾಕ್ ಪರ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿ 15 ವಿಕೆಟ್ ಕಬಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.