ಬೆಂಗಳೂರು: ಐಪಿಎಲ್ 2025 ಟೂರ್ನಿಯ ಲಖನೌ ಸೂಪರ್ ಜೈಂಟ್ಸ್ ತಂಡದ (LSG) ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನು ಆ ತಂಡದಿಂದ ಕೈಬಿಡಲಾಗುತ್ತದೆ ಎಂದು ಕೆಲ ವರದಿಗಳು ಹೇಳಿವೆ.

ಈ ಕುರಿತು ಎಲ್ಎಸ್ಜಿಯ ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ವೆಬ್ಸೈಟ್ ವರದಿ ಮಾಡಿದೆ.

2025ರ ಐಪಿಎಲ್ ಹರಾಜಿನ ಮೊದಲೇ ಕೆ.ಎಲ್. ರಾಹುಲ್ ಅವರನ್ನು ತಂಡದಿಂದ ಕೈಬಿಡಲಾಗುತ್ತದೆ ಎಂದು ಹೇಳಿದೆ.

ತಂಡದ ಮಾಲೀಕರು ರಾಹುಲ್ ಮೇಲೆ ವಿಶ್ವಾಸವನ್ನು ಕೈಬಿಟ್ಟಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.

2024ರ ಐಪಿಎಲ್ ಟೂರ್ನಿಯಲ್ಲಿ ಎಲ್ಎಸ್ಜಿ ಹಿನ್ನಡೆ ಅನುಭವಿಸುವಲ್ಲಿ ಕೆ.ಎಲ್. ರಾಹುಲ್ ಪಾತ್ರ ಎದ್ದು ಕಾಣುತ್ತಿದೆ ಎಂದು ತಂಡದ ಮೆಂಟರ್ ಜಹೀರ್ ಖಾನ್ ಹಾಗೂ ಕೋಚ್ ಜಸ್ಟಿನ್ ಲಾಂಜರ್ ಅವರು ವಿಶ್ಲೇಷಿಸಿದ್ದಾರೆ ಎನ್ನಲಾಗಿದೆ. ಈ ವರದಿಯ ಅನುಸಾರ ಹರಾಜಿನ ಮೊದಲೇ ಕೆ.ಎಲ್. ರಾಹುಲ್ ಅವರನ್ನು ತಂಡದ ಮಾಲೀಕರು ಕೈ ಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ರಾಹುಲ್ ಎಲ್ಎಸ್ಜಿಯಿಂದ ಹೊರಬಂದಿದ್ದೇ ಆದರೆ, ಅವರು ಈ ಸಾರಿ ಆರ್ಸಿಬಿ ಪ್ರವೇಶ ಮಾಡಬಹುದು ಎಂದು ಐಪಿಎಲ್ ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ಕಳೆದ ಟೂರ್ನಿಯಲ್ಲಿ ಫ್ರ್ಯಾಂಚೈಸಿಯ ಮಾಲೀಕ ಸಂಜೀವ್ ಗೊಯೆಂಕಾ ಅವರು ಕೆ.ಎಲ್. ರಾಹುಲ್ ಅವರನ್ನು ವಾಚಾಮಗೋಚರವಾಗಿ ‘ತರಾಟೆ’ ತೆಗೆದುಕೊಂಡಂತೆ ಕಂಡ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿತ್ತು. ಇದು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಅಂದಿನಿಂದ ಎಲ್ಎಸ್ಜಿ–ರಾಹುಲ್ ಸಂಬಂಧ ಹಳಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.