ಬೆಂಗಳೂರು: ಬೆಂಗಳೂರು ಬ್ಲಾಸ್ಟರ್ಸ್ ಬೌಲರ್‌ಗಳ ಮುಂದೆ ಆಡಲು ಪರ ದಾಡಿದ ಬಿಜಾಪುರ ಬುಲ್ಸ್ ತಂಡವು ಬ್ಯಾಟ್ಸ್‌ಮನ್‌ಗಳು ಸಾಧಾರಣ ಮೊತ್ತ ಗಳಿಸಿದರು.

ಟಾಸ್ ಗೆದ್ದ ಬೆಂಗಳೂರು ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮವೇಗಿ ರೋಹನ್ ಎಂ ರಾಜು (26ಕ್ಕೆ2) ಮತ್ತು ವಿಶಿಷ್ಟ ರೀತಿಯ ರನ್ ಅಪ್ ಇರುವ ಸ್ಪಿನ್ನರ್ ಡಿ. ಭರತ್ (22ಕ್ಕೆ1) ಅವರ ದಾಳಿಯ ಮುಂದೆ ಬುಲ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 133 ರನ್ ಗಳಿಸಿತು.

ಇನಿಂಗ್ಸ್‌ನ ಆರಂಭದಲ್ಲಿಯೇ ಬುಲ್ಸ್ ತಂಡವು ಆಘಾತ ಅನುಭವಿಸಿತು. ಆರಂಭಿಕ ಆಟಗಾರ ಎಂ.ಜಿ. ನವೀನ್ ಮೂರನೇ ಓವರ್‌ನಲ್ಲಿ ಆನಂದ ದೊಡ್ಡಮನಿ ಎಸೆತದಲ್ಲಿ ಔಟಾದರು. ನಾಯಕ ಭರತ್ ಚಿಪ್ಲಿ (39; 25ಎಸೆತ, 6ಬೌಂಡರಿ, 1ಸಿಕ್ಸರ್) ಮತ್ತು ರಾಜು ಭಟ್ಕಳ (13 ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 49 ರನ್ ಇಡೀ ಇನಿಂಗ್ಸ್‌ನಲ್ಲಿ ಇದೇ ದೊಡ್ಡ ಮೊತ್ತದ ಪಾಲುದಾರಿಕೆ ಆಟವಾಯಿತು. ಕೆಳಕ್ರಮಾಂಕದಲ್ಲಿ ಸ್ವಪ್ನಿಲ್ ಶಿವಾಜಿ ಯಳವೆ (31; 25ಎಸೆತ, 3ಬೌಂಡರಿ) ಸ್ವಲ್ಪ ಆತ್ಮವಿಶ್ವಾಸದಿಂದ ಆಡಿದರು. ಅದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು.

ಆದರೆ ಉಳಿದ ಬ್ಯಾಟ್ಸ್‌ಮನ್‌ಗಳಿಗೆ ಬೆಂಗಳೂರು ಬೌಲರ್ ರೋಹನ್ ರಾಜು ಮತ್ತು ಭರತ್ ಕಡಿವಾಣ ಹಾಕಿದರು. ಆದರೆ ಫೀಲ್ಡಿಂಗ್‌ನಲ್ಲಿ ಆದ ಕೆಲವು ಲೋಪಗಳಿಂದಾಗಿ ಕೆಲವು ರನ್‌ಗಳು ಬುಲ್ಸ್ ತಂಡದ ಖಾತೆಗೆ ಬಂದು ಸೇರಿದವು. ಗುರಿ ಬೆನ್ನಟ್ಟಿದ ಬೆಂಗಳೂರು ತಂಡವು 6 ಓವರ್‌ಗಳಲ್ಲಿ 1 ವಿಕೆಟ್‌ಗೆ 29 ರನ್ ಗಳಿಸಿತು. ಆ ಸಂದರ್ಭದಲ್ಲಿ ಮಳೆ ಬಂದ ಕಾರಣ ಆಟವನ್ನು ನಿಲ್ಲಿಸಲಾಯಿತು.

ಸಂಕ್ಷಿಪ್ತ ಸ್ಕೋರು: ಬಿಜಾಪುರ ಬುಲ್ಸ್: 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 133 (ಭರತ್ ಚಿಪ್ಲಿ 39, ರಾಜು ಭಟ್ಕಳ 20, ಸುನೀಲ್ ರಾಜು 15, ಸ್ವಪ್ನಿಲ್ ಶಿವಾಜಿ ಯಳವೆ 31, ವಿ. ಕೌಶಿಕ್ 38ಕ್ಕೆ1, ಆನಂದ ದೊಡ್ಡಮನಿ 15ಕ್ಕೆ1, ರೋಹನ್ ಎಂ. ರಾಜು 26ಕ್ಕೆ2, ಡಿ. ಭರತ್ 22ಕ್ಕೆ1) ವಿವರ ಅಪೂರ್ಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.