ಲಖನೌ: ತಂಡದ ನಾಯಕನ ಉತ್ತಮ ಅಡಿಪಾಯ ಹಾಗೂ ಆಯುಷ್ ಬಡೋನಿ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್, ಐಪಿಎಲ್ ಟಿ20ಯ 17ನೇ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 7 ವಿಕೆಟ್ಗಳ ನಷ್ಟಕ್ಕೆ 167 ರನ್ ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಲಖನೌ ತಂಡವು, ಮೊದಲ ವಿಕೆಟ್ ಕಳೆದುಕೊಳ್ಳುವ ಹೊತ್ತಿಗೆ ಅಬ್ಬರಿಸಿತು. 2.5 ಓವರ್ಗಳಲ್ಲಿ 28 ರನ್ ದಾಖಲಿಸಿದ್ದಾಗ 19 ರನ್ ಗಳಿಸಿದ್ದ ಕ್ವಿಂಟನ್ ಡಿ ಕಾಕ್ ಅವರು ಖಲೀಲ್ ಅಹ್ಮದ್ ಅವರ ಬೌಲಿಂಗ್ನಲ್ಲಿ ಔಟಾದರು. ಆದರೆ ತಂಡದ ನಾಯಕ ಕೆ.ಎಲ್.ರಾಹುಲ್ ಅವರು ಜವಾಬ್ದಾರಿಯುತ ಆಟವಾಡಿದರು. ಒಂದು ಸಿಕ್ಸರ್, ಐದು ಬೌಂಡ್ರಿ ಸಹಿತ 22 ಎಸೆತ ಎದುರಿಸಿ 177.27 ಸರಾಸರಿಯೊಂದಿಗೆ 39 ರನ್ ಕಲೆ ಹಾಕಿದರು.

ಆದರೆ ನಂತರ ಬಂದ ದೇವದತ್ತ ಪಡಿಕ್ಕಲ್ (3), ಮಾರ್ಕಸ್ ಸ್ಟಾಯಿನ್ಸ್ (8), ನಿಖೊಲಸ್ ಪೂರಣ್ (0), ದೀಪಕ್ ಹೂಡಾ (10) ಹಾಗೂ ಕೃಣಾಲ್ ಪಾಂಡ್ಯಾ (3) ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲಿಲ್ಲ.

ನಂತರ ಬಂದ ಆಯುಷ್ ಬಡೋನಿ ಅವರು 35 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಐದು ಬೌಂಡ್ರಿ ಸಹಿತ 157.14 ಸರಾಸರಿಯೊಂದಿಗೆ 55 ರನ್ ದಾಖಲಿಸಿ ಔಟಾಗದೇ ಉಳಿದರು. ಇವರಿಗೆ ಅರ್ಷದ್ ಖಾನ್ (20) ಜತೆಯಾದರು.

ಒಂದು ಹಂತದಲ್ಲಿ 12.6 ಓವರ್ಗೆ ಏಳು ವಿಕೆಟ್ ಕಳೆದುಕೊಂಡಾಗ ಲಖನೌ ಸೂಪರ್ ಜೈಂಟ್ಸ್ ತಂಡದ ಸ್ಕೋರ್ 94 ಆಗಿತ್ತು. ಅಲ್ಲಿಂದ ಮುಂದೆ ಆಯುಷ್ ಅವರ ತಾಳ್ಮೆ ಮತ್ತು ಲಯಬದ್ಧ ಆಟದಿಂದಾಗಿ ತಂಡದ ಮೊತ್ತ 167ಕ್ಕೆ ತಲುಪಿತು.

ರಿಷಭ್ ಪಂತ್ ನಾಯಕತ್ವದ ದೆಹಲಿ ಕ್ಯಾಪಿಟಲ್ಸ್ ಪರವಾಗಿ ಕುಲದೀಪ್ ಯಾದವ್ ಮೂರು ವಿಕೆಟ್ ಕಬಳಿಸಿದರು. ಖಲೀಲ್ ಅಹ್ಮದ್ 2 ವಿಕೆಟ್ ಗಳಿಸಿದ್ದಾರೆ. ಇಶಾಂತ್ ಶರ್ಮಾ ಹಾಗೂ ಮುಕೇಶ್ ಕುಮಾರ್ ತಲಾ ಒಂದು ವಿಕೆಟ್ ಕಬಳಿಸಿದರು. ಅಕ್ಸರ್ ಪಟೇಲ್ ರನ್ ನಿಯಂತ್ರಿಸಿದರೂ, ಅವರಿಗೆ ವಿಕೆಟ್ ಲಭಿಸಲಿಲ್ಲ.

168 ರನ್ಗಳ ಗುರಿ ಬೆನ್ನು ಹತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ಇತ್ತೀಚಿನ ವರದಿ ಬಂದಾಗ 3 ಓವರ್ಗಳಲ್ಲಿ 22 ರನ್ ಗಳಿಸಿ, ಆಟ ಮುಂದುವರಿಸಿತ್ತು.

ಡೆಲ್ಲಿ ತಂಡವು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ತಂಡವು ಐದು ಪಂದ್ಯಗಳಲ್ಲಿ ಆಡಿದೆ. ಒಂದರಲ್ಲಿ ಗೆದ್ದು, ಉಳಿದ ಪಂದ್ಯಗಳಲ್ಲಿ ಸೋತಿದೆ. ರಾಹುಲ್ ಬಳಗವು ಮೂರನೇ ಸ್ಥಾನದಲ್ಲಿದೆ. ಎಲ್ಲ ವಿಭಾಗಗಳಲ್ಲಿಯೂ ಸಮತೋಲನ ಸಾಧಿಸಿರುವ ಲಖನೌ ತಂಡವು ಮೇಲ್ನೋಟಕ್ಕೆ ಡೆಲ್ಲಿಗಿಂತ ಬಲಿಷ್ಠವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.