ಬೆಂಗಳೂರು: ಬೀಸು ಹೊಡೆತಗಳ ಬ್ಯಾಟರ್ ಅಭಿನವ್ ಮನೋಹರ್ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಗಾಗಿ ಶನಿವಾರ ನಡೆದ ಅಟಗಾರರ ಹರಾಜು ಪ್ರಕ್ರಿಯೆಯಲ್ಲಿ ‘ಎ’ ಗುಂಪಿನಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದರು.

ಐಪಿಎಲ್ ಆಡಿರುವ ಅನುಭವಿ ಆಟಗಾರ ಅಭಿನವ್ ಮನೋಹರ್ ಅವರನ್ನು ₹15 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್ ಖರೀದಿಸಿತು.

ನಿರೂಪಕ ಚಾರುಶರ್ಮಾ ನಡೆಸಿಕೊಟ್ಟ ಬಿಡ್ ಪ್ರಕ್ರಿಯೆಯ ಆರಂಭದಲ್ಲಿಯೇ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಅವರನ್ನು ₹14 ಲಕ್ಷಕ್ಕೆ ಮತ್ತು ದೇವದತ್ತ ಪಡಿಕ್ಕಲ್ ₹13 ಲಕ್ಷಕ್ಕೆ ಗುಲ್ಬರ್ಗ ಮಿಸ್ಟಿಕ್ಸ್ ತಂಡ ಖರೀದಿಸಿತು. ಕರುಣ್ ನಾಯರ್ ಅವರನ್ನು ಮೈಸೂರು ವಾರಿಯರ್ಸ್ ₹ 6.8 ಲಕ್ಷ ಕೊಟ್ಟು ಖರೀದಿಸಿತು. ವೇಗದ ಬೌಲರ್ ವೈಶಾಖ ವಿಜಯಕುಮಾರ್ ಹಾಗೂ ಪ್ರಸಿದ್ಧ ಕೃಷ್ಣ ಅವರನ್ನು ಮೈಸೂರು ತಂಡವು ಕ್ರಮವಾಗಿ ₹8.80 ಲಕ್ಷ ಹಾಗೂ ₹7.40 ಲಕ್ಷ ಕೊಟ್ಟು ಖರೀದಿಸಿತು.

ಭಾರತ ತಂಡ ಮತ್ತು ಐಪಿಎಲ್ ಟೂರ್ನಿಯಲ್ಲಿ ಆಡಿದವರು ‘ಎ’ ಗುಂಪಿನಲ್ಲಿದ್ದರು. ಮೂಲ ಬೆಲೆಯನ್ನು ₹ 2 ಲಕ್ಷ ನಿಗದಿಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.