ನವದೆಹಲಿ:ವೀಕ್ಷಕ ವಿವರಣೆಕಾರ, ಹಿರಿಯ ಕ್ರಿಕೆಟಿಗ ಸಂಜಯ್ಮಾಂಜ್ರೇಕರ್ಭಾರತ ತಂಡದ ಆಲ್‌ರೌಂಡರ್ ರವೀಂದ್ರ ಜಡೇಜ ಅವರ ಇಂದಿನಬ್ಯಾಟಿಂಗ್ ವೈಖರಿಗೆಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ರವೀಂದ್ರ ಜಡೇಜ 76 ರನ್‌ಗಳನ್ನು ಸಿಡಿಸುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದಿದ್ದರು. ಆದರೆ ಅಂತಿಮ ಹಂತದಲ್ಲಿ ಭಾರತಕ್ಕೆ ಜಯ ದೊರೆಯಲಿಲ್ಲ. ಈ ಪಂದ್ಯದಲ್ಲಿ ರವೀಂದ್ರ ಜಡೇಜ ಅಕ್ರಮಣಕಾರಿಯಾಗಿ ಆಡಿದ್ದರು.

ಇದಕ್ಕೆಸಂಜಯ್ ಮಾಂಜ್ರೇಕರ್ ಜಡೇಜ ಉತ್ತಮ ಆಟವಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದು ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶ್ವಕಪ್ ಟೂರ್ನಿಯಲ್ಲಿಮಾಂಜ್ರೇಕರ್ ಮತ್ತು ಜಡೇಜ ನಡುವಿನ ಟ್ವೀಟ್ ವಾರ್ ತಾರಕಕ್ಕೆ ಏರಿತ್ತು.

ಭಾರತ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯದ ಸಂದರ್ಭದಲ್ಲಿ ಮಾಂಜ್ರೇಕರ್ ತಮ್ಮ ಕಾಮೆಂಟ್ರಿಯಲ್ಲಿ, ‘ನಾನು ಸಣ್ಣಪುಟ್ಟ ಆಟಗಾರರ ಅಭಿಮಾನಿಯಲ್ಲ. ಸದ್ಯ 50 ಓವರ್‌ಗಳ ಕ್ರಿಕೆಟ್‌ನಲ್ಲಿ ರವೀಂದ್ರ ಜಡೇಜ ಅದೇ ತರಹ ಇದ್ದಾರೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಜಡೇಜ‘ನೀವು ಆಡಿರುವ ಪಂದ್ಯಗಳಿಗಿಂತ ದುಪ್ಟಟ್ಟು ಸಂಖ್ಯೆಯ ಪಂದ್ಯಗಳಲ್ಲಿ ಆಡಿದ್ದೇನೆ. ಬೇರೆಯವರುಪರಿಶ್ರಮ ಮತ್ತು ಪ್ರತಿಭೆಯಿಂದ ಸಾಧನೆ ಮಾಡಿದವರನ್ನು ಗೌರವಿಸುವುದನ್ನು ಕಲಿಯಿರಿ ಎಂದು ಖಾರವಾಗಿ ಹೇಳಿದ್ದರು.

ಇದೀಗ ನ್ಯೂಜಿಲೆಂಡ್ ವಿರುದ್ಧ ಪಂದ್ಯದಲ್ಲಿ ಜಡೇಜ ಉತ್ತಮವಾಗಿ ಆಡಿರುವುದಕ್ಕೆ ಟ್ವೀಟಿಗರು ಮಾಂಜ್ರೇಕರ್ ಅವರ ಕಾಲೆಳೆದು ಟೀಕಿಸಿದ್ದಾರೆ. ಇಂತಹ ಹಲವು ಟ್ರೋಲ್‌ಗಳು ಇಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.