ದುಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಮಂಗಳವಾರ ಅಗ್ರಸ್ಥಾನಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ತೋರಿದ ಭರ್ಜರಿ ಸಾಮರ್ಥ್ಯವು ಅವರ ಕ್ರಮಾಂಕದಲ್ಲಿ ಬಡ್ತಿಗೆ ಕಾರಣವಾಗಿದೆ.

ಭಾರತ ತಂಡವು ಸರಣಿಯನ್ನು 1–2ರಿಂದ ಕೈಚೆಲ್ಲಿದರೂ, 38 ವರ್ಷದ ಮಿಥಾಲಿ, ಮೂರು ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿದ್ದರು. ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ 72 ಮತ್ತು 59 ರನ್, ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಔಟಾಗದೆ 75 ರನ್ ಗಳಿಸಿದ್ದರು.

ಸದ್ಯ ಅವರಿಗೆ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನಗಳ ಬಡ್ತಿ ಸಿಕ್ಕಿದೆ. 2018ರ ಫೆಬ್ರುವರಿಯಲ್ಲಿ ಅವರು ಕೊನೆಯ ಬಾರಿ ಅಗ್ರಸ್ಥಾನದಲ್ಲಿದ್ದರು.

ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಜೇಯ 91 ರನ್ ಗಳಿಸಿದ ಬಳಿಕ 2005ರ ಏಪ್ರಿಲ್‌ನಲ್ಲಿ ಅವರು ಮೊದಲ ಬಾರಿ ಅಗ್ರಸ್ಥಾನಕ್ಕೇರಿದ್ದರು.

ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 49 ಸ್ಥಾನಗಳ ಜಿಗಿತ ದಾಖಲಿಸಿ 71ನೇ ಸ್ಥಾನದಲ್ಲಿದ್ದಾರೆ. ವೇಗಿ ಜೂಲನ್ ಗೋಸ್ವಾಮಿ 53ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ವಿಭಾಗದಲ್ಲಿ ಆಲ್‌ರೌಂಡರ್ ದೀಪ್ತಿ ಶರ್ಮಾ 12ನೇ ಸ್ಥಾನದಲ್ಲಿದ್ದಾರೆ.ಮಹಿಳಾ ಟಿ20 ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ ಪಾಕಿಸ್ತಾನದ ನಿದಾ ದರ್ 15ನೇ ಸ್ಥಾನಕ್ಕೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.