ವೆಲ್ಲಿಂಗ್ಟನ್:ನ್ಯೂಜಿಲೆಂಡ್ ತಂಡದ ನಾಯಕಿ ಸೋಫಿ ಡಿವೈನ್ ಟಿ20 ಕ್ರಿಕೆಟ್‌ನಲ್ಲಿ ಸತತ ಐದು ಬಾರಿ ಐವತ್ತಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ಭಾರತದ ಮಿಥಾಲಿ ರಾಜ್, ತಮ್ಮದೇ ದೇಶದ ರಾಸ್ ಟೇಲರ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಅವರ ದಾಖಲೆ ಮುರಿದರು. ಮಾತ್ರವಲ್ಲದೆ, ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್ ಎನಿಸಿದರು.

ಸೋಫಿ ಆಟದ ನೆರವಿನಿಂದಕಿವೀಸ್ ತಂಡ ಸದ್ಯದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ3–1 ಅಂತರದಲ್ಲಿ ಗೆದ್ದುಕೊಂಡಿತು.

ಇಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿವಿಸ್, ಸೋಫಿ ಗಳಿಸಿದ ಭರ್ಜರಿ ಶತಕದ (105) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತು. ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 17 ಓವರ್‌ಗಳಲ್ಲಿ 102 ರನ್ ಗಳಿಸಿ ಆಲೌಟ್ ಆಯಿತು.

ಸೋಫಿ ಕಳೆದ ನಾಲ್ಕುಪಂದ್ಯಗಳಲ್ಲಿ ಕ್ರಮವಾಗಿ ಅಜೇಯ 54,61,77ಮತ್ತು 72 (ಭಾರತ ವಿರುದ್ಧ)ರನ್ ಗಳಿಸಿದ್ದರು. ಮಿಥಾಲಿ ರಾಜ್, ರಾಸ್ ಟೇಲರ್ ಹಾಗೂ ಕ್ರಿಸ್ ಗೇಲ್ ಅವರು ಈ ಹಿಂದೆ ಸತತ ನಾಲ್ಕು ಬಾರಿ 50ಕ್ಕಿಂತ ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.