ಅಬುಧಾಬಿ (ಪಿಟಿಐ): ಶುಕ್ರವಾರವಷ್ಟೇ ಅಬುಧಾಬಿಗೆ ಬಂದಿಳಿದಿದ್ದ ಸ್ಯಾಮ್ ಕರನ್ ಶನಿವಾರ ಮುಂಬೈ ಎದುರಿನ ಪಂದ್ಯದಲ್ಲಿ ಕಣಕ್ಕಿಳಿದರು.

ಜೀವ ಸುರಕ್ಷಾ ನಿಯಮದ ಪ್ರಕಾರ; ಟೂರ್ನಿಯಲ್ಲಿ ಆಡುವ ಮುನ್ನ ಆರು ದಿನಗಳ ಕ್ವಾರಂಟೈನ್ (ಪ್ರತ್ಯೇಕವಾಸ) ನಿಯಮ ಪಾಲಿಸಬೇಕು. ಆದರೆ ಆಸ್ಟ್ರೇಲಿಯಾದ ಸ್ಯಾಮ್ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಆಡಿದ ನಂತರ ಇಲ್ಲಿಗೆ ಬಂದಿದ್ದರು.

ಯುಎಇಗೆ ಬರುವ ಮುನ್ನ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ತಾವೆಲ್ಲರೂ ಈಗಾಗಲೇ ಜೀವಸುರಕ್ಷಾ ವಲಯದಲ್ಲಿ ಆಡಿ ಬಂದಿರುವುದರಿಂದ ಕ್ವಾರಂಟೈನ್ ನಿಯಮ ಕಡಿತ ಮಾಡಬೇಕು ಎಂದು ಮನವಿ ಮಾಡಿದ್ದರು.

ಆದರೆ ಬಿಸಿಸಿಐ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಚೆನ್ನೈ ತಂಡದಲ್ಲಿ ಸ್ಯಾಮ್ ಕರನ್ ಕಣಕ್ಕಿಳಿದಿದ್ದರಿಂದ ಅವರೊಂದಿಗೆ ಬಂದಿರುವ ಉಳಿದ ಆಟಗಾರರಿಗೂ ಕ್ವಾರಂಟೈನ್ ನಿಯಮದಿಂದ ರಿಯಾಯಿತಿ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.