ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ನೋಬಾಲ್ಗಳನ್ನು ಪರಿಶೀಲಿಸಲು ಮತ್ತು ತೀರ್ಪು ನೀಡಲು ಪ್ರತ್ಯೇಕ ಅಂಪೈರ್ ನೇಮಕ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಆದರೆ, ಪವರ್ ಪ್ಲೇಯರ್ ಆಡಿಸುವ ವಿಷಯವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಮುಂದಿನ ವಾರ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಟೂರ್ನಿಯಲ್ಲಿ ಪ್ರಾಯೋಗಿಕವಾಗಿ ಪವರ್ ಪ್ಲೇಯರ್ ಆಡಿಸಲು ಸಾಧ್ಯವಾಗದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಇಲ್ಲಿ ನಡೆದ ಐಪಿಎಲ್ ಆಡಳಿತ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ವಹಿಸಿದ್ದರು.

‘ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ಐಪಿಎಲ್ ಟೂರ್ನಿಯಲ್ಲಿ ರೆಗ್ಯುಲರ್ ಅಂಪೈರ್ಗಳ ಜೊತೆಗೆ ಮತ್ತೊಬ್ಬ ಅಂಪೈರ್ ಕೂಡ ಇರುವರು. ಅವರು ನೋಬಾಲ್ಗಳ ಮೇಲೆ ಕಣ್ಣಿಡುವರು. ಆದರೆ ಅವರು ಮೂರು ಅಥವಾ ನಾಲ್ಕನೇ ಅಂಪೈರ್ ಅಲ್ಲ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಿರಿಯ ಸದಸ್ಯರೊಬ್ಬರು ತಿಳಿಸಿದ್ದಾರೆ.

ಹೋದ ವರ್ಷದ ಐಪಿಎಲ್ನಲ್ಲಿ ನೋಬಾಲ್ ಬಗ್ಗೆ ಆಟಗಾರರು ಮತ್ತು ಫೀಲ್ಡ್ ಅಂಪೈರ್ಗಳ ನಡುವೆ ಬಹಳಷ್ಟು ಜಟಾಪಟಿಗಳು ನಡೆದಿದ್ದರು. ಕೆಲವು ತೀರ್ಪುಗಳು ಫಲಿತಾಂಶದ ಮೇಲೆ ಪರಿಣಾಮ ಬೀರಿದ್ದವು. ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣದ ಪಂದ್ಯದಲ್ಲಿ ಇಂತಹದ್ದೇ ಸಮಸ್ಯೆಯಾಗಿತ್ತು. ಮುಂಬೈ ತಂಡದ ಬೌಲರ್ ಲಸಿತ್ ಮಾಲಿಂಗ ಹಾಕಿದ್ದ ನೋಬಾಲ್ ಅನ್ನು ಗುರುತಿಸುವಲ್ಲಿ ಅಂಪೈರ್ ಎಸ್. ರವಿ ವಿಫಲರಾಗಿದ್ದರು. ಆಗ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅಂಪೈರ್ ನಡುವೆ ಮಾತಿನ ಚಕಮಕಿ ನಡೆದಿತ್ತು.

‘ಪವರ್ ಪ್ಲೇಯರ್ ಕುರಿತು ಚರ್ಚೆ ನಡೆಯಿತು. ಆದರೆ, ಅದನ್ನು ಜಾರಿಗೆ ತರಲು ಸಮಯದ ಆಭಾವ ಇರುವ ಕಾರಣ ಈ ಬಾರಿ ಬೇಡ ಎಂಬ ಅಭಿಪ್ರಾಯ ವ್ಯಕ್ತವಾಯಿತು’ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಡಿಸೆಂಬರ್ 19ರಂದು ಆಟಗಾರರ ಹರಾಜು ಪ್ರಕ್ರಿಯೆ
ಮುಂಬೈ: ಮುಂದಿನ ವರ್ಷದ ಐಪಿಎಲ್ ಟೂರ್ನಿಗಾಗಿ ಡಿಸೆಂಬರ್ 19ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.

ಇದೇ ಮೊದಲ ಬಾರಿ ಕೋಲ್ಕತ್ತದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಬಾಲಿವುಡ್ ನಟ ಶಾರೂಕ್ ಖಾನ್ ಒಡೆತನದ ಕೋಲ್ಕತ್ತ ನೈಟ್ ರೈಡರ್ಸ್ ಫ್ರ್ಯಾಂಚೈಸ್ನ ತವರಿನಲ್ಲಿ ಇದೇ ಮೊದಲ ಬಾರಿಗೆ ಬಿಡ್ಡಿಂಗ್ ನಡೆಯಲಿದೆ. ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು. 2019ರ ಹರಾಜು ಪ್ರಕ್ರಿಯೆಯಲ್ಲಿ ಪ್ರತಿಯೊಂದು ತಂಡಕ್ಕೂ ₹ 82 ಕೋಟಿ ಮಂಜೂರು ಮಾಡಲಾಗಿತ್ತು. ಈ ವರ್ಷ ₹85 ಕೋಟಿಗೆ ಹೆಚ್ಚಿಸಲಾಗಿದೆ. ಹೋದ ಹರಾಜು ಪ್ರಕ್ರಿಯೆಯಲ್ಲಿ ತಂಡಗಳು ಇನ್ನೂ ತಮ್ಮ ಖಾತೆಯಲ್ಲಿ ಸ್ವಲ್ಪಮಟ್ಟಿನ ಮೊತ್ತವನ್ನು ಉಳಿಸಿಕೊಂಡಿವೆ.

ತಂಡಗಳು ತಮ್ಮ ಪರ್ಸ್ನಲ್ಲಿ ಹೊಂದಿರುವ ಮೊತ್ತ; ಚೆನ್ನೈ ಸೂಪರ್ ಕಿಂಗ್ಸ್ (₹ 3.2 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್ (₹7.7ಕೋಟಿ), ಕಿಂಗ್ಸ್ ಇಲೆವನ್ ಪಂಜಾಬ್ (₹3.7 ಕೋಟಿ), ಕೋಲ್ಕತ್ತ ನೈಟ್ ರೈಡರ್ಸ್ (₹ 6.05ಕೋಟಿ), ಮುಂಬೈ ಇಂಡಿಯನ್ಸ್ (₹ 3.55 ಕೋಟಿ), ರಾಜಸ್ಥಾನ್ ರಾಯಲ್ಸ್ (₹ 7.15 ಕೋಟಿ), ರಾಯಲ್ ಚಾಲೆಂಜರ್ಸ್ ಬೆಂಗಳೂರು (₹ 1.80 ಕೋಟಿ), ಸನ್ರೈಸರ್ಸ್ ಹೈದರಾಬಾದ್ (₹ 5.30 ಕೋಟಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.