ನವದೆಹಲಿ: ಕೋವಿಡ್ನಿಂದ ತೊಂದರೆಗೆ ಒಳಗಾದ ದಕ್ಷಿಣ ದೆಹಲಿಯ ಜನತೆಗೆ ಉಚಿತ ಊಟ ಒದಗಿಸಲು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಅವರ ಕ್ರಿಕೆಟ್ ಅಕಾಡೆಮಿ ಮುಂದಾಗಿದೆ.

‘ಕೋವಿಡ್ ಎರಡನೇ ಅಲೆಯು ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ನೆರವಾಗುವುದು ನಮ್ಮ ಜವಾಬ್ದಾರಿಯಾಗಬೇಕು. ಹೀಗಾಗಿ ಅಕಾಡೆಮಿ ವತಿಯಿಂದ ಉಚಿತ ಊಟ ನೀಡಲು ಮುಂದಾಗಿದ್ದೇವೆ’ ಎಂದು ಭಾರತ ತಂಡದಲ್ಲಿ ಆಲ್ರೌಂಡರ್ ಆಗಿದ್ದ ಪಠಾಣ್ ಟ್ವೀಟ್ ಮಾಡಿದ್ದಾರೆ.

ಅತ್ಯುತ್ತಮ ಸ್ವಿಂಗ್ ಬೌಲರ್ಗಳಲ್ಲಿ ಒಬ್ಬರಾಗಿರುವ ಇರ್ಫಾನ್ 29 ಟೆಸ್ಟ್ ಮತ್ತು 120 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. 36 ವರ್ಷದ ಈ ಆಟಗಾರ ರಾಯಪುರದಲ್ಲಿ ನಡೆದ ರಸ್ತೆ ಸುರಕ್ಷತಾ ವಿಶ್ವ ಕ್ರಿಕೆಟ್ ಸೀರಿಸ್ನಲ್ಲಿ ಪಾಲ್ಗೊಂಡ ನಂತರ ಮಾರ್ಚ್ ತಿಂಗಳಲ್ಲಿ ಸೋಂಕಿಗೆ ಒಳಗಾಗಿದ್ದರು. ಸಹೋದರ ಯೂಸುಫ್ ಪಠಾಣ್ಗೂ ಸೋಂಕು ತಗುಲಿತ್ತು.

ಕಳೆದ ವರ್ಷ ಕೋವಿಡ್ ಮೊದಲನೇ ಅಲೆ ಜೋರಾಗಿದ್ದ ಸಂದರ್ಭದಲ್ಲಿ ಈ ಸಹೋದರರು ನಾಲ್ಕು ಸಾವಿರ ಮಾಸ್ಕ್ಗಳನ್ನು ಹಂಚಿ ಮಾನವೀಯತೆ ಮೆರೆದಿದ್ದರು. ಅವರ ತಂದೆ ಮೆಹಮೂದ್ ಖಾನ್ ಈ ವರ್ಷದ ಆರಂಭದಲ್ಲಿ ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಕೋವಿಡ್ ರೋಗಿಗಳಿಗೆ ಆಹಾರ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.