ಲಾಹೋರ್: ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅತ್ಯುತ್ತಮ ಭದ್ರತಾ ಸೌಕರ್ಯ ಕಲ್ಪಿಸಲು ಅನುವಾಗುವಂತೆ ಭಾರತ ತಂಡಕ್ಕೆ ಲಾಹೋರ್ನಲ್ಲಿ ಅದರ ಎಲ್ಲಾ ಪಂದ್ಯಗಳನ್ನು ನಡೆಸುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಲಹೆ ನೀಡಿದೆ.

ಏಪ್ರಿಲ್ ಅಂತ್ಯದಲ್ಲಿ ಐಸಿಸಿಗೆ ಕಳುಹಿಸಲಾದ ಟೂರ್ನಿಯ ಕರಡು ವೇಳಾಪಟ್ಟಿಯಲ್ಲಿ ಈ ಸಲಹೆ ನೀಡಲಾಗಿದೆ ಎಂದು ಪಿಸಿಬಿಯ ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

‘ಭಾರತ ತಂಡಕ್ಕೆ ಪ್ರಯಾಣವನ್ನು ಕಡಿಮೆ ಮಾಡಲು ಮತ್ತು ಉತ್ತಮ ಭದ್ರತಾ ವ್ಯವಸ್ಥೆ ಒದಗಿಸಲು ಲಾಹೋರ್ ಅನ್ನು ಸೂಚಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಏಷ್ಯಾ ಕಪ್ ಟೂರ್ನಿ ಪಂದ್ಯಗಳನ್ನು ಆಡಲು ಭಾರತ ನಿರಾಕರಿಸಿತ್ತು. ನಂತರ ಆ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲಾಗಿತ್ತು.

ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿದ್ದು, ಮುಂದಿನ ವರ್ಷದ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಸಲು ಯೋಜಿಸಲಾಗಿದೆ.

ಐಸಿಸಿ ಕಾರ್ಯಕಾರಿ ಮಂಡಳಿಯು ಕರಡು ವೇಳಾಪಟ್ಟಿಯನ್ನು ಇನ್ನೂ ಅನುಮೋದಿಸಿಲ್ಲ. ಆದರೆ, ಪಿಸಿಬಿಯು ಕರಾಚಿ ಮತ್ತು ರಾವಲ್ಪಿಂಡಿಯನ್ನು ಚಾಂಪಿಯನ್ಸ್ ಟ್ರೋಫಿಯ ಇತರ ಪಂದ್ಯಗಳಿಗೆ ತಾಣಗಳನ್ನಾಗಿ ಆಯ್ಕೆ ಮಾಡಿದೆ.

ಪಾಕಿಸ್ತಾನ 1996ರ ವಿಶ್ವಕಪ್ನ ಜಂಟಿ ಆತಿಥ್ಯ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದರ ಆತಿಥ್ಯ ವಹಿಸುತ್ತಿದೆ. 2008ರಲ್ಲಿ ಏಷ್ಯಾಕಪ್ ಹಾಗೂ ಕಳೆದ ವರ್ಷ ಇದೇ ಟೂರ್ನಿಯ ಕೆಲವು ಪಂದ್ಯಗಳನ್ನು ಅದು ತವರಿನಲ್ಲಿ ನಡೆಸಿತ್ತು.

ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತದೆಯೇ ಎಂದು ಬಿಸಿಸಿಐ ಇನ್ನೂ ಔಪಚಾರಿಕವಾಗಿ ದೃಢಪಡಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.