ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕರ್ನಾಟಕದ ಆಟಗಾರರು ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿರುವ ಕೆ.ಎಲ್. ರಾಹುಲ್, ಎಂದಿನಂತೆ ಅಮೋಘ ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಇದನ್ನೂ ಓದಿ:IPL 2022: ನಿಯಮ ಉಲ್ಲಂಘನೆ; ರಾಹುಲ್, ಸ್ಟೋಯಿನಿಸ್ಗೆ ದಂಡ

ಅತ್ತ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ವೇಗದ ಬೌಲರ್ ಪ್ರಸಿದ್ಧ ಕೃಷ್ಣ, ತಮ್ಮ ನಿಖರ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ.

ಈ ನಡುವೆ ಪ್ರಸಿದ್ಧ ಕೃಷ್ಣ ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ರಾಹುಲ್, ಕಾಲೆಳೆದಿದ್ದಾರೆ.

ಏಪ್ರಿಲ್ 18 ಸೋಮವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಏಳು ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು.

ಗೆಲುವಿನ ಬಳಿಕ ಪ್ರಸಿದ್ಧ ಕೃಷ್ಣ, 'ಹೌದು, ನಮ್ಮಿಂದಲೂ ಸಾಧ್ಯ' ಎಂಬ ಅಡಿಬರಹದೊಂದಿಗೆ ಪಂದ್ಯದ ಚಿತ್ರಗಳನ್ನು ಹಂಚಿದ್ದರು. ಇದಕ್ಕೆ ಕಾಮೆಂಟ್ ಮಾಡಿರುವ ರಾಹುಲ್, 'ಯಾಕ್ಜಗಳ ಆಡ್ತಿಯಾ ಯಾವಾಗ್ಲೂ ?' ಎಂದು ಕೇಳಿದ್ದಾರೆ.

ಏನಿದು ಘಟನೆ?
ಪಂದ್ಯದ ನಡುವೆ ಕೆಕೆಆರ್ ಆರಂಭಿಕ ಬ್ಯಾಟರ್ ಆ್ಯರನ್ ಫಿಂಚ್ ಹಾಗೂ ಪ್ರಸಿದ್ಧ ಕೃಷ್ಣ ನಡುವೆ ಮಾತಿನ ಚಕಮಕಿ ನಡೆಯಿತು.

ಮೊದಲು ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಫಿಂಚ್ (58) ವಿಕೆಟ್ ಗಳಿಸುವಲ್ಲಿ ಪ್ರಸಿದ್ಧ ಯಶ ಕಂಡಿದ್ದರು.

ಫಿಂಚ್ ವಿಕೆಟ್ ಪಡೆದ ಪ್ರಸಿದ್ಧ, ಮಾತಿನ ಚಕಮಕಿಗೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಫಿಂಚ್ ಕೂಡ ಪ್ರತ್ಯುತ್ತರ ನೀಡುವುದು ಕಂಡುಬಂದಿತು. ಈ ಘಟನೆಯ ಹಿನ್ನೆಲೆಯಲ್ಲಿ ಪ್ರಸಿದ್ಧಪೋಸ್ಟ್‌ಗೆ ರಾಹುಲ್ ಕಾಮೆಂಟ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.

ಇದೇ ಪಂದ್ಯದಲ್ಲಿ ರಾಜಸ್ಥಾನ್ ತಂಡದ ಜೋಸ್ ಬಟ್ಲರ್ ಶತಕ (103) ಗಳಿಸಿದ್ದರೆ ಯಜುವೇಂದ್ರ ಚಾಹಲ್, ಚೊಚ್ಚಲ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್ ಸಾಧನೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.