ಚೆನ್ನೈನ ಚೆಪಾಕ್ ಕ್ರೀಡಾಂಗಣವೆಂದರೆ ಸ್ಪಿನ್ ಮೋಡಿಗಾರರಿಗೆ ಹೇಳಿ ಮಾಡಿಸಿದ ತಾಣ. ಆದರೆ ಮಂಗಳವಾರ ಮುಕ್ತಾಯವಾದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ಗಮನ ಸೆಳೆದವರು ಇಬ್ಬರು ವೇಗಿಗಳು.

ಕೆಂದೂಳು ಹಾರುತ್ತಿದ್ದ ಪಿಚ್ನಲ್ಲಿ ಉಭಯ ತಂಡಗಳ ಸ್ಪಿನ್ನರ್ಗಳು ವಿಕೆಟ್ ಉರುಳಿಸಿದರೇನೂ ನಿಜ. ಆದರೆ, ಅವರ ಯಶಸ್ಸಿನ ಹಿಂದೆ ಇಶಾಂತ್ ಶರ್ಮಾ ಮತ್ತು ಜೇಮ್ಸ್ ಆ್ಯಂಡರ್ಸನ್ ಅವರ ಅನುಭವದ ಬೆಂಬಲವೂ ಇತ್ತು. ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ಗಳ ಮೈಲುಗಲ್ಲು ಮುಟ್ಟಿದ ಇಶಾಂತ್ ಗೆ ಈಗ 32ರ ಹರೆಯ. 611 ವಿಕೆಟ್ ಕಬಳಿಸಿರುವ ಸ್ವಿಂಗ್ ಕಿಂಗ್ ಜಿಮ್ಮಿ (ಆ್ಯಂಡರ್ಸನ್) ಗೆ 38 ವರ್ಷ. ಸುದೀರ್ಘ ವೃತ್ತಿಜೀವನದಲ್ಲಿ ಇವರಿಬ್ಬರು ಅನುಭವಿಸಿದ ಏಳು ಬೀಳುಗಳು ಅಪಾರ. ಆದರೆ, ಕ್ರಿಕೆಟ್ ಪ್ರೀತಿ ಮತ್ತು ಅದಕ್ಕಾಗಿ ವಹಿಸಿದ ಶ್ರದ್ಧೆ ಮಾತ್ರ ಅಸಾಧಾರಣ. ಆಸ್ಟ್ರೇಲಿಯಾದ ಗ್ಲೆನ್ ಮೆಕ್ಗ್ರಾ ನಂತರ ’ಲೆಜೆಂಡ್‘ ಎಂದು ಕರೆಸಿಕೊಳ್ಳುವ ಎತ್ತರಕ್ಕೆ ಬೆಳೆದ ಶ್ರೇಯ ಜಿಮ್ಮಿಯದ್ದು.

ಅದೇ ಮೆಕ್ಗ್ರಾ ಅವರನ್ನು ಆದರ್ಶವಾಗಿಟ್ಟುಕೊಂಡು ಕ್ರಿಕೆಟ್ನಲ್ಲಿ ವೇಗಿಯಾಗಿ ಬೆಳೆದ ದೆಹಲಿಯ ಇಶಾಂತ್ ಈಗ 300 ವಿಕೆಟ್ ಗಳಿಸಿರುವ ಬೌಲರ್ಗಳ ಕ್ಲಬ್ ಸೇರಿದ್ದಾರೆ. ಆರಡಿ ನಾಲ್ಕಿಂಚು ಎತ್ತರದ ನೀಳಕಾಯದ ಹುಡುಗ. ಉದ್ದುದ್ದ ಬೆಳೆದು ಕೆದರಿ ಹಾರಾಡುವ ಕೇಶರಾಶಿ, ಕುರುಚಲು ಗಡ್ಡದ ಇಶಾಂತ್ ಅವರು ಜಿಮ್ಮಿಯ ಎತ್ತರಕ್ಕೆ ಬೆಳೆಯಲು ಇನ್ನೂ ಬಹಳ ದೂರ ಸಾಗಬೇಕಿದೆ. 98 ಟೆಸ್ಟ್ಗಳನ್ನು ಆಡಿರುವ ಇಶಾಂತ್ 18354 ಎಸೆತಗಳನ್ನು ಹಾಕಿದ್ದಾರೆ. ಅದರಲ್ಲಿ 2008ರಲ್ಲಿ ಅವರು ಪರ್ತ್ ಕ್ರೀಡಾಂಗಣದಲ್ಲಿ ಆ ಕಾಲಘಟ್ಟದ ಅಗ್ರಗಣ್ಯ ಬ್ಯಾಟ್ಸ್ಮನ್ಗೆ ರಿಕಿ ಪಾಂಟಿಂಗ್ ಅವರನ್ನು ಸುಮಾರು ಒಂದು ತಾಸು ತಡೆದು ನಿಲ್ಲಿಸಿದ ಎಸೆತಗಳೂ ಸೇರಿವೆ. ಭಾರತದ ಅಂಗಳದಲ್ಲಿ ಇಂಗ್ಲೆಂಡ್ನ ಜಿಮ್ಮಿಯ ಸಾಧನೆ ಇವತ್ತು ಚರ್ಚೆಯ ಕೇಂದ್ರಬಿಂದುವಾಗಿದೆ. ಆದರೆ ದಶಕದ ಹಿಂದೆ ಲಾರ್ಡ್ಸ್ನಲ್ಲಿ ಭಾರತವು ಇದೇ ಇಂಗ್ಲೆಂಡ್ ಬಳಗವನ್ನು ಹಣಿದು ಇತಿಹಾಸ ನಿರ್ಮಿಸಲು ಇಶಾಂತ್ ಏಳು ವಿಕೆಟ್ಗಳನ್ನು ಉರುಳಿಸಿದ್ದು ಕಾರಣವಾಗಿತ್ತು.

ಕಪಿಲ್ ದೇವ್, ಜಾವಗಲ್ ಶ್ರೀನಾಥ್ ಅವರು ಹಾಕಿಕೊಟ್ಟ ಹಾದಿಯಲ್ಲಿ ಜಹೀರ್ ಖಾನ್, ಇರ್ಫಾನ್ ಪಠಾಣ್ ಅವರು ತಮ್ಮ ಛಾಪು ಮೂಡಿಸುತ್ತಿದ್ದ ಹೊತ್ತಿನಲ್ಲಿಯೇ ಇಶಾಂತ್ ಕೂಡ ಭಾರತ ತಂಡಕ್ಕೆ ಕಾಲಿಟ್ಟವರು. 2007ರಲ್ಲಿ ಢಾಕಾದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದ ಇಶಾಂತ್ ಅವರ ಎತ್ತರವೇ ಅವರಿಗೆ ವರದಾನವಾಗಿತ್ತು. ಬೌನ್ಸ್, ಸ್ವಿಂಗ್ಗಳನ್ನು ಯಶಸ್ವಿಯಾಗಿ ಪ್ರಯೋಗಿಸಲು ಸಹಾಯಕವೂ ಆಯಿತು. ಅನಿಲ್ ಕುಂಬ್ಳೆ ಮತ್ತು ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ತಮ್ಮ ಪ್ರತಿಭೆಯನ್ನು ಬೆಳೆಯಲು ಹತ್ತಾರು ಅವಕಾಶಗಳನ್ನು ಪಡೆದುಕೊಂಡರು. ಕ್ರಿಕೆಟ್ ಆಟಕ್ಕಾಗಿ ಹತ್ತನೇ ತರಗತಿಗೇ ಶಾಲೆಯಿಂದ ಹೊರಬಂದಿದ್ದ ಇಶಾಂತ್ ಭಾರತ ತಂಡದ ಪ್ರಮುಖ ಬೌಲರ್ಗಳ ಸಾಲಿನಲ್ಲಿ ನಿಲ್ಲುವ ತಮ್ಮ ಕನಸನ್ನು ಬಹುತೇಕ ಸಾಕಾರಗೊಳಿಸಿಕೊಂಡಿದ್ದಾರೆ.

ಶಾಲೆಯಲ್ಲಿ ವಾಲಿಬಾಲ್ ಆಟದತ್ತ ಹೋಗಬೇಕಿದ್ದ ಇಶಾಂತ್, ಕ್ರಿಕೆಟ್ನತ್ತ ಬಂದಿದ್ದು ಭಾರತ ತಂಡಕ್ಕೆ ಒಳ್ಳೆಯದೇ ಆಯಿತು. ತಮ್ಮ ನಿರಂತರ ಕಲಿಕೆಯ ಗುಣ ಮತ್ತು ಸ್ನೇಹ ಮನೋಭಾವದಿಂದಾಗಿ ದೀರ್ಘ ಕಾಲದ ಬೌಲರ್ ಆಗಿ ರೂಪುಗೊಂಡಿದ್ದಾರೆ. ಅವರು ತಾವು ಆಡುವ ಪ್ರತಿ ಪಂದ್ಯದಲ್ಲಿಯೂ ಐದಾರು ವಿಕೆಟ್ಗಳನ್ನು ಗಳಿಸಿರದಿರಬಹುದು. ಆದರೆ ಪ್ರತಿಯೊಂದು ಪಂದ್ಯದಲ್ಲಿಯೂ ತಮ್ಮ ಪೇಸ್, ವೇರಿಯೆಷನ್ಗಳ ಮೂಲಕ ಬ್ಯಾಟ್ಸ್ಮನ್ಗಳ ಮೇಲೆ ಹಾಕುವ ಒತ್ತಡವು ಗಮನಾರ್ಹ. ಅದರ ಫಲ ಉಳಿದ ಬೌಲರ್ಗಳಿಗೆ ಮತ್ತು ತಂಡಕ್ಕೆ ಸಿಕ್ಕೇ ಸಿಗುತ್ತದೆ.

ಇಶಾಂತ್ 14 ವರ್ಷಗಳಿಂದ ತಂಡದಲ್ಲಿ ಉಳಿದುಕೊಂಡು ಬರಲು ಅವರ ನಿರಂತರ ಕಲಿಕೆಯ ಗುಣ. ತಂಡಕ್ಕೆ ಪದಾರ್ಪಣೆ ಮಾಡಿದ್ದಾಗ ಸೀನಿಯರ್ ಬೌಲರ್ಗಳಿಂದ ಕಲಿತರು. ಈಗ ತಮಗಿಂತ ಕಿರಿಯ ಬೌಲರ್ಗಳು ತಂಡಕ್ಕೆ ಬಂದಿದ್ದಾರೆ. ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಅವರೊಂದಿಗೆ ಬೆರೆತು ಆಡುವ ರೀತಿ ಅಚ್ಚರಿ ಮೂಡಿಸುತ್ತದೆ.

’ಬೂಮ್ (ಬೂಮ್ರಾ)ನಿಂದ ಕಲಿಯುವುದು ಬಹಳಷ್ಟಿದೆ. ಭುವಿ ಕಟರ್ ಪ್ರಯೋಗಿಸುವ ರೀತಿ ಸುಂದರವಾದ್ದದ್ದು. ಉಮೇಶ್ ಒಳ್ಳೆಯ ಬೌಲರ್. ಅವರೆಲ್ಲರಿಂದ ಒಂದಿಷ್ಟು ಕಲಿತಿದ್ದೇನೆ. ನನ್ನ ಅನುಭವದ ಕೆಲವು ಸಂಗತಿಗಳನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ‘ ಎಂದು ಈಚೆಗೆ ಟಿವಿ ಸಂದರ್ಶನವೊಂದರಲ್ಲಿ ಇಶಾಂತ್ ಹೇಳಿದ್ದರು. ಭಾರತದಲ್ಲಿ ಈಗ ಮಧ್ಯಮವೇಗದ ಬೌಲರ್ಗಳಿಗೆ ಕೊರತೆಯಿಲ್ಲ. ಹೊಸ ತಲೆಮಾರಿನ ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾರ್ದೂಲ್ ಠಾಕೂರ್ ಅವರು ತಂಡದಲ್ಲಿ ತಮ್ಮ ಕಾಲೂರಲು ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದಾರೆ. ಈ ಸ್ಪರ್ಧೆಯ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ನ ಅಗತ್ಯಕ್ಕೆ ತಕ್ಕಂತೆ ತಮ್ಮ ಬೌಲಿಂಗ್ ಕೌಶಲಗಳನ್ನು ಬದಲಿಸಿಕೊಳ್ಳುತ್ತ ಮುಂದುವರಿದಿರುವ ಇಶಾಂತ್ಗೆ ಫಿಟ್ನೆಸ್ನದ್ದೇ ದೊಡ್ಡ ಸವಾಲು.

ಆದರೆ ಎಲ್ಲ ಮಧ್ಯಮವೇಗಿಗಳಿಗೆ ಕಾಡುವಂತಹ ಗಾಯದ ಸಮಸ್ಯೆಗಳು ದೆಹಲಿಯ ’ಲಂಬೂಜೀ‘ಯನ್ನೂ ಕಾಡಿವೆ. ಈಚೆಗೆ ಐಪಿಎಲ್ನಲ್ಲಿ ಗಾಯಗೊಂಡಿದ್ದ ಅವರು ಆಸ್ಟ್ರೇಲಿಯಾ ಎದುರಿನ ಸರಣಿಗೆ ತೆರಳಿರಲಿಲ್ಲ. ಎನ್ಸಿಎಯಲ್ಲಿ ಆರೈಕೆ ಪಡೆದ ನಂತರ ಕಣಕ್ಕಿಳಿದಿರುವ ಮೊದಲ ಟೆಸ್ಟ್ನಲ್ಲಿ ಪರವಾಗಿಲ್ಲ ಎನ್ನುವ ಮಟ್ಟಕ್ಕೆ ಬೌಲಿಂಗ್ ಮಾಡಿದ್ದಾರೆ. ಅವರು ಇನ್ನೆರಡು ಟೆಸ್ಟ್ಗಳನ್ನು ಆಡಿದರೆ 100ರ ಗಡಿ ದಾಟುತ್ತಾರೆ. ಭಾರತ ತಂಡದಲ್ಲಿ ಏಕದಿನ ಕ್ರಿಕೆ್ಟ್ ಆಡಿ ಐದು ವರ್ಷ ಮತ್ತು ಟಿ20 ಕ್ರಿಕೆಟ್ ಆಡಿ ಎಂಟು ವರ್ಷಗಳು ಗತಿಸಿವೆ. ಟೆಸ್ಟ್ ಮತ್ತು ಐಪಿಎಲ್ನಲ್ಲಿ ಅವರು ಇನ್ನೆಷ್ಟು ದೂರ ಓಡಲಿದ್ದಾರೆಂಬುದು ಕುತೂಹಲದ ವಿಷಯ. ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮುತ್ತಿರುವ ಜಿಮ್ಮಿ, ತಮ್ಮ 30ನೇ ವಯಸ್ಸಿನ ನಂತರವೇ 300ಕ್ಕೂ ಹೆಚ್ಚು ವಿಕೆಟ್ಗಳನ್ನು ಸಂಪಾದಿಸಿದ್ದು. ಅವರ ಮಟ್ಟಕ್ಕೆ ಇಶಾಂತ್ ಬೆಳೆಯುವರೇ ಎಂದು ಕಾದು ನೋಡಬೇಕು.

ಇದನ್ನೂ ಓದಿ:PV Web Exclusive: ವರ್ಷದ ಮೊದಲ ಗ್ರ್ಯಾನ್ಸ್ಲಾಂ ಟೂರ್ನಿಗೆ ‘ಗಾಯ’?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.