ಕರ್ನಾಟಕ ತಂಡದ ಬೌಲರ್ ವಿ. ಕೌಶಿಕ್ –ಪ್ರಜಾವಾಣಿ ಚಿತ್ರ/ಎಸ್.ಕೆ. ದಿನೇಶ್
ಸ್ಕೋರ್ ಕಾರ್ಡ್
ಬಂಗಾಳ 5ಕ್ಕೆ249 (78 ಓವರ್‌ಗಳಲ್ಲಿ) ಶಿವಾಂ ಸಿ ಪಾಂಡೆ ಬಿ ಕೌಶಿಕ್ 0 (3ಎ) ಚಟರ್ಜಿ ಸಿ ಸತೇರಿ ಬಿ ಕೌಶಿಕ್ 55 (120ಎ, 4X5) ಸುದೀಪ್‌ಕುಮಾರ್ ಸಿ ನಿಕಿನ್ ಬಿ ಕೌಶಿಕ್ 5 (45ಎ) ಅನುಸ್ಟುಪ್ ಎಲ್‌ಬಿಡಬ್ಲ್ಯು ಬಿ ಶ್ರೇಯಸ್ 101 (164ಎ, 4X16) ಶಹಬಾಜ್ ಔಟಾಗದೆ 54 (103ಎ, 4X6) ಘೋಷ್ ಸಿ ಮಯಂಕ್ ಬಿ ಅಭಿಲಾಷ್ 22 (27ಎ, 4X1, 6X2) ಸಹಾ ಔಟಾಗದೆ 6 (7ಎ, 4X1) ಇತರೆ: 6 (ಬೈ 2, ಲೆಗ್‌ಬೈ 2, ವೈಡ್ 1, ನೋಬಾಲ್ 1) ವಿಕೆಟ್ ಪತನ: 1–0 (ಶಿವಾಂ ಡೇ; 0.3), 2–21 (ಸುದೀಪ್‌ಕುಮಾರ್ ಘರಾಮಿ; 15.2), 3–121 (ಸುದೀಪ್ ಚಟರ್ಜಿ; 42.1), 4–201 (ಅನುಸ್ಟುಪ್ ಮಜುಂದಾರ್;67.4), 5–242 (ಅವಿಲಿನ್ ಘೋಷ್; 76.2) ಬೌಲಿಂಗ್ ವಿ. ಕೌಶಿಕ್ 18–9–29–3, ಅಭಿಲಾಷ್ ಶೆಟ್ಟಿ 15–4–52–1, ವಿದ್ಯಾಧರ ಪಾಟೀಲ 14–2–55–0, ಶ್ರೇಯಸ್ ಗೋಪಾಲ್ 19–1–66–1, ಹಾರ್ದಿಕ್ ರಾಜ್ 12–1–43–0
ನೂರರ ಜೊತೆಯಾಟ
ಘರಾಮಿ ಔಟಾದ ನಂತರ ಕ್ರೀಸ್‌ಗೆ ಬಂದ ಅನುಸ್ಟುಪ್ ಅವರು ವೇಗವಾಗಿ ರನ್ ಗಳಿಸಿದರು. ಇನ್ನೊಂದೆಡೆ ಕ್ರೀಸ್‌ನಲ್ಲಿದ್ದ ಚಟರ್ಜಿ ಮಾತ್ರ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಊಟದ ವಿರಾಮಕ್ಕೆ (2ಕ್ಕೆ86) ಇಬ್ಬರು ತಲಾ 37 ರನ್ ಗಳಿಸಿದ್ದರು. ವಿರಾಮದ ನಂತರವೂ ಇವರಿಬ್ಬರ ಜೊತೆಯಾಟ ಮುಂದುವರಿಯಿತು. ಚಟರ್ಜಿ (55; 120ಎ, 4X5) ಅರ್ಧಶತಕ ಗಳಿಸಿದರು. 100 ರನ್ ಸೇರಿಸಿದ ಈ ಜೊತೆಯಾಟವನ್ನೂ ಮಧ್ಯಮವೇಗಿ ಕೌಶಿಕ್ ಮುರಿದರು. ವಿಕೆಟ್‌ಕೀಪರ್ ಸುಜಯ್ ಸತೇರಿ ಪಡೆದ ಕ್ಯಾಚ್‌ಗೆ ಚಟರ್ಜಿ ಆಟಕ್ಕೆ ತೆರೆ ಬಿತ್ತು. ಆದರೆ ಅನುಸ್ಟುಪ್ ತಮ್ಮ ಆಟ ಮುಂದುವರಿಸಿದರು. ಅವರಿಗೆ ಶಹಬಾಜ್ ಜೊತೆಗೂಡಿದರು. ಅನುಸ್ಟುಪ್ 124 ನಿಮಿಷದಲ್ಲಿ ಶತಕದ ಗಡಿ ಮುಟ್ಟಿದರು. ಅದಕ್ಕಾಗಿ 157 ಎಸೆತ ಎದುರಿಸಿದರು. 16 ಬೌಂಡರಿಗಳನ್ನು ಚಚ್ಚಿದರು. ಇದರಿಂದಾಗಿ ಬೌಲರ್‌ಗಳು ಪರದಾಡುವಂತಾಯಿತು. ಅನುಸ್ಟುಪ್ ಮತ್ತು ಶಹಬಾಜ್ ನಾಲ್ಕನೆ ವಿಕೆಟ್ ಜೊತೆಯಾಟದಲ್ಲಿ 80 ರನ್ ಸೇರಿಸಿದರು. ಚಹಾ ವಿರಾಮದ ನಂತರದ ಅವಧಿ ಯಲ್ಲಿ ಅನುಸ್ಟುಪ್ ಆಟಕ್ಕೆ ಕಡಿವಾಣ ಹಾಕುವಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಯಶಸ್ವಿಯಾದರು. ಅನುಭವಿ ಸ್ಪಿನ್ನರ್ ಬೀಸಿದ ಎಲ್‌ಬಿಡಬ್ಲ್ಯು ಜಾಲದಲ್ಲಿ ಅನುಸ್ಟುಪ್ ಬಂಧಿಯಾದರು. ಅಸಮಾಧಾನದಿಂದಲೇ ಹೊರ ನಡೆದರು. ಕ್ರೀಸ್‌ನಲ್ಲಿದ್ದ ಶಹಬಾಜ್ ಇನಿಂಗ್ಸ್ ಕಟ್ಟುವ ಹೊಣೆ ಹೊತ್ತರು. ಅವಿಲಿನ್ ಘೋಷ್ (22 ರನ್) ಜೊತೆಗೆ ಇನಿಂಗ್ಸ್ ಬೆಳೆಸಿದರು. ಘೋಷ್ 2 ಸಿಕ್ಸರ್ ಮತ್ತು 1 ಬೌಂಡರಿ ಕೂಡ ಗಳಿಸಿದರು. ಈ ಪಂದ್ಯದ ಮೂಲಕ ಪದಾರ್ಪಣೆ ಮಾಡಿದ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಅವರು ಘೋಷ್ ಅವರನ್ನು ಔಟ್ ಮಾಡಿ ತಮ್ಮ ಚೊಚ್ಚಲ ವಿಕೆಟ್ ಗಳಿಸಿದರು.