ದಿಂಡಿಗಲ್:ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದದಲ್ಲಿ ಆತಿಥೇಯ ತಮಿಳುನಾಡು ತಂಡ ಕರ್ನಾಟಕ ಎದುರು ಜಯದತ್ತ ಮುನ್ನಡೆದಿದೆ.

ಮೊದಲ ಇನಿಂಗ್ಸ್ನಲ್ಲಿ29 ರನ್ಗಳ ಅಲ್ಪ ಮುನ್ನಡೆ ಪಡೆದಿದ್ದ ಕರುಣ್ ನಾಯರ್ ಪಡೆ ಎರಡನೇ ಇನಿಂಗ್ಸ್ನಲ್ಲಿ ಕೇವಲ 151 ರನ್ಗಳಿಗೆ ಆಲೌಟ್ ಆಗಿತ್ತು. ಮೂರನೇ ದಿನದಾಟದ ಅಂತ್ಯಕ್ಕೆ89 ರನ್ ಗಳಿಸಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿದ್ದ ಕರ್ನಾಟಕ ಕೊನೆಯ ದಿನ ಬೇಗನೆ ಆಲೌಟ್ ಆಗಿತ್ತು.

ಇದನ್ನೂ ಓದಿ: ಕರ್ನಾಟಕ ಬ್ಯಾಟಿಂಗ್ ವೈಫಲ್ಯ: ರೋಚಕಘಟ್ಟದತ್ತ ವಾಲಿದ ಪಂದ್ಯ

ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಭರವಸೆಯ ಆಟಗಾರದೇವದತ್ತ ಪಡಿಕ್ಕಲ್ ಹಾಗೂ ಶರತ್ ಬಿ.ಆರ್. ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ದಿನದ ಎರಡನೇ ಓವರ್ನಲ್ಲಿಯೇ ಶರತ್(28) ಔಟಾದರು. ಹತ್ತು ಓವರ್ಗಳ ಬಳಿಕ ಪಡಿಕಲ್ (39) ಪೆವಿಲಿಯನ್ ಸೇರಿಕೊಂಡರು. ಕೊನೆಯಲ್ಲಿ ತಲಾ 22 ರನ್ ಗಳಿಸಿದ ಡೇವಿಡ್ ಮಥಾಯಿಸ್ ಹಾಗು ಕೆ.ಗೌತಮ್ಮೊತ್ತವನ್ನು 150ರ ಗಡಿ ದಾಟಿಸಿದರು.

ಒಟ್ಟಾರೆ 181ರನ್ ಗುರಿ ಪಡೆದು ಇನಿಂಗ್ಸ್ ಆರಂಭಿಸಿರುವ ತಮಿಳುನಾಡು ತಂಡಬೇಗನೆ ಪಂದ್ಯ ಮುಗಿಸುವ ಲೆಕ್ಕಾಚಾರದಲ್ಲಿದ್ದು, ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಬೇಗನೆ ನಿಲ್ಲಿಸಲಾಗಿತ್ತು. ಹೀಗಾಗಿ ವೇಗವಾಗಿ ರನ್ಗಳಿಸುವ ಯೋಜನೆಯೊಂದಿಗೆ ಕಣಕ್ಕಿಳಿದಿರುವ ಆತಿಥೇಯರು 7 ಓವರ್ಗಳಲ್ಲಿನಷ್ಟವಿಲ್ಲದೆ 46ರನ್ ಗಳಿಸಿದ್ದಾರೆ.

ಆರಂಭಿಕರಾದ ಅಭಿನವ್ ಮುಕುಂದ್ (27) ಹಾಗೂ ಮುರುಳಿ ವಿಜಯ್ (14) ಕ್ರೀಸ್ನಲ್ಲಿದ್ದಾರೆ. ತಮಿಳುನಾಡು ತಂಡ ರಣಜಿ ಟೂರ್ನಿಯಲ್ಲಿ ಶುಭಾರಂಭ ಮಾಡಲು ಇನ್ನು 136 ರನ್ ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರು
ಕರ್ನಾಟಕ ಮೊದಲ ಇನಿಂಗ್ಸ್: 336ಕ್ಕೆ ಆಲೌಟ್
ದೇವದತ್ತ ಪಡಿಕ್ಕಲ್ 78 ರನ್, ಪವನ್ ದೇಶಪಾಂಡೆ 65, ಕೆ. ಗೌತಮ್ 51, ಮಯಂಕ್ ಅಗರವಾಲ್ 43
ಆರ್. ಅಶ್ವಿನ್ಗೆ 79ಕ್ಕೆ 4 ವಿಕೆಟ್
ಮಣಿಮಾರನ್ ಸಿದ್ದಾರ್ಥ್ 47ಕ್ಕೆ 2 ವಿಕೆಟ್
ಕೃಷ್ಣಮೂರ್ತಿ ವಿಘ್ನೇಶ್ 55ಕ್ಕೆ 2 ವಿಕೆಟ್
ಬಾಬಾ ಅಪರಾಜಿತ್ 24ಕ್ಕೆ 1 ವಿಕೆಟ್

ತಮಿಳುನಾಡು ಮೊದಲ ಇನಿಂಗ್ಸ್: 307ಕ್ಕೆ ಆಲೌಟ್
ದಿನೇಶ್ ಕಾರ್ತಿಕ್ 113, ಅಭಿನವ್ ಮುಕುಂದ್47 ರನ್, ಬಾಬಾ ಅಪರಾಜಿತ್ 37, ಮುರುಳಿ ವಿಜಯ್ 32 ರನ್
ಕೆ. ಗೌತಮ್ 110ಕ್ಕೆ 6ವಿಕೆಟ್
ರೋನಿತ್ ಮೋರೆ 67ಕ್ಕೆ 2 ವಿಕೆಟ್
ವಿ. ಕೌಶಿಕ್ 36ಕ್ಕೆ 1 ವಿಕೆಟ್
ಶ್ರೇಯಸ್ ಗೋಪಾಲ್ 50ಕ್ಕೆ 1 ವಿಕೆಟ್

ಕರ್ನಾಟಕ ಎರಡನೇ ಇನಿಂಗ್ಸ್: 151ಕ್ಕೆ ಆಲೌಟ್
ದೇವದತ್ತ ಪಡಿಕ್ಕಲ್ 39 ರನ್, ಶರತ್ ಬಿ.ಆರ್. 28 ರನ್, ಕೆ. ಗೌತಮ್ 22 ರನ್, ಬಿ.ಆರ್.ಶರತ್ 22 ರನ್, ಪವನ್ ದೇಶಪಾಂಡೆ 20 ರನ್
ಆರ್. ಅಶ್ವಿನ್ಗೆ 46ಕ್ಕೆ 4 ವಿಕೆಟ್
ಕೃಷ್ಣಮೂರ್ತಿ ವಿಘ್ನೇಶ್ 31ಕ್ಕೆ 3 ವಿಕೆಟ್
ರವಿಶ್ರೀನಿವಾಸನ್ ಸಾಯಿ ಕಿಶೋರ್ 13ಕ್ಕೆ 1 ವಿಕೆಟ್
ಮಣಿಮಾರನ್ ಸಿದ್ದಾರ್ಥ್ 38ಕ್ಕೆ 1 ವಿಕೆಟ್

ತಮಿಳುನಾಡುಎರಡನೇ ಇನಿಂಗ್ಸ್: 7 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 46ರನ್
ಆರಂಭಿಕರಾದ ಅಭಿನವ್ ಮುಕುಂದ್ ಔಟಾಗದೆ 27 ರನ್
ಮುರುಳಿ ವಿಜಯ್ ಔಟಾಗದೆ 14ರನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.