ನವದೆಹಲಿ: ಚುಟುಕು ಕ್ರಿಕೆಟ್ ಪರಿಣತ ರಿಂಕು ಸಿಂಗ್ ಅವನ್ನು ಇಂಗ್ಲೆಂಡ್ ಲಯನ್ಸ್ ವಿರುದ್ಧ ಬುಧವಾರ ಅಹಮದಾಬಾದ್‌ನಲ್ಲಿ ಆರಂಭವಾಗುವ ನಾಲ್ಕು ದಿನಗಳ ಎರಡನೇ ಕ್ರಿಕೆಟ್ ‘ಟೆಸ್ಟ್’ ಪಂದ್ಯದಲ್ಲಿ ಆಡುವ ಭಾರತ ‘ಎ’ ತಂಡಕ್ಕೆ ಮಂಗಳವಾರ ಸೇರ್ಪಡೆ ಮಾಡಲಾಗಿದೆ.

ಮಧ್ಯಮ ಕ್ರಮಾಂಕದ ಬೀಸು ಹೊಡೆತಗಳ ಆಟಗಾರ ರಿಂಕು ಅವರು ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಸಂದರ್ಭದಲ್ಲಿ ಎರಡು ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ಆಡಿದ ಎರಡು ಪಂದ್ಯಗಳಲ್ಲಿ ಕ್ರಮವಾಗಿ 17 ಮತ್ತು 38 ರನ್ ಗಳಿಸಿದ್ದರು. ಉತ್ತರ ಪ್ರದೇಶದ ರಿಂಕು 44 ಪ್ರಥಮ ದರ್ಜೆ ಪಂದ್ಯಗಳಲ್ಲಿ 57.57 ಸರಾಸರಿಯಲ್ಲಿ 3109 ರನ್ ಕಲೆಹಾಕಿದ್ದಾರೆ.

ಭಾರತ– ಇಂಗ್ಲೆಂಡ್ ಲಯನ್ಸ್ ನಡುವಣ ಮೊದಲ ‘ಟೆಸ್ಟ್’ಕಳೆದ ವಾರ ‘ಡ್ರಾ’ದಲ್ಲಿ ಅಂತ್ಯಗೊಂಡಿತ್ತು.

15 ಆಟಗಾರರ ಭಾರತ ‘ಎ’ ತಂಡ ಹೀಗಿದೆ: ಅಭಿಮನ್ಯು ಈಶ್ವರನ್ (ನಾಯಕ), ಸಾಯಿ ಸುದರ್ಶನ್, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ತಿಲಕ್ ವರ್ಮಾ, ಕುಮಾರ್ ಕುಶಾಗ್ರ, ವಾಷಿಂಗ್ಟನ್ ಸುಂದರ್, ಸೌರಭ್ ಕುಮಾರ್, ಅರ್ಷದೀಪ್ ಸಿಂಗ್, ತುಷಾರ್ ದೇಶಪಾಂಡೆ, ವಿದ್ವತ್ ಕಾವೇರಪ್ಪ, ಉಪೇಂದ್ರ ಯಾದವ್, ಆಕಾಶ್ ದೀಪ್, ಯಶ್ ದಯಾಳ್, ರಿಂಕು ಸಿಂಗ್.
.IND vs ENG: ರಾಹುಲ್ಗೆ ಕೀಪಿಂಗ್ ಹೊಣೆ ಇಲ್ಲ: ದ್ರಾವಿಡ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.