ಕೋಲ್ಕತ್ತ: ಸೌರಾಷ್ಟ್ರ ತಂಡದವರು ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ತಮ್ಮ ಹಿಡಿತ ಬಿಗಿಗೊಳಿಸಿದ್ದು, ಪ್ರಶಸ್ತಿಯತ್ತ ದಿಟ್ಟ ಹೆಜ್ಜೆಯಿಟ್ಟಿದ್ದಾರೆ.

ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜೈದೇವ್ ಉನದ್ಕತ್ ಬಳಗ ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳ ಮುನ್ನಡೆ ಪಡೆಯಿತು. ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಬಂಗಾಳ, ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದೆ.

ಆತಿಥೇಯ ತಂಡ ಇನ್ನೂ 61 ರನ್‌ಗಳಿಂದ ಹಿನ್ನಡೆಯಲ್ಲಿದ್ದು, ಸೋಲು ತಪ್ಪಿಸಲು ಹೋರಾಟ ನಡೆಸುತ್ತಿದೆ. ಮನೋಜ್ ತಿವಾರಿ (ಬ್ಯಾಟಿಂಗ್ 57) ಮತ್ತು ಶಹಬಾಜ್ ಅಹಮದ್ (ಬ್ಯಾಟಿಂಗ್ 13) ಕ್ರೀಸ್‌ನಲ್ಲಿದ್ದರು.

ಇದಕ್ಕೂ ಮುನ್ನ 5 ವಿಕೆಟ್‌ಗಳಿಗೆ 317 ರನ್‌ಗಳಿಂದ ಆಟ ಮುಂದುವರಿಸಿದ್ದ ಸೌರಾಷ್ಟ್ರ, 404 ರನ್‌ಗಳಿಗೆ ಆಲೌಟಾಯಿತು. ಅರ್ಪಿತ್ ವಾಸವಡ (81) ಹಿಂದಿನ ದಿನದ ಮೊತ್ತಕ್ಕೆ ಔಟಾದರೆ, ಚಿರಾಗ್ ಜಾನಿ (60) ಮೂರು ರನ್ ಸೇರಿಸಿ ವಿಕೆಟ್ ಒಪ್ಪಿಸಿದರು. ಕೊನೆಯ ಕ್ರಮಾಂಕದ ಬ್ಯಾಟರ್‌ಗಳ ಉತ್ತಮ ಆಟದಿಂದ ತಂಡದ ಮೊತ್ತ 400ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಬಂಗಾಳ 54.1 ಓವರ್‌ಗಳಲ್ಲಿ 174. ಸೌರಾಷ್ಟ್ರ 110 ಓವರ್‌ಗಳಲ್ಲಿ 404 (ಅರ್ಪಿತ್ ವಾಸವಡ 81, ಚಿರಾಗ್ ಜಾನಿ 60, ಪ್ರೇರಕ್ ಮಂಕಡ್ 33, ಪಾರ್ಥ್ ಭುತ್ ಔಟಾಗದೆ 14, ಧರ್ಮೇಂದ್ರಸಿಂಹ ಜಡೇಜ 29, ಮುಕೇಶ್ ಕುಮಾರ್ 111ಕ್ಕೆ 4, ಇಶಾನ್ ಪೊರೆಲ್ 86ಕ್ಕೆ 3) ಎರಡನೇ ಇನಿಂಗ್ಸ್: ಬಂಗಾಳ 53 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 169 (ಅಭಿಮನ್ಯು ಈಶ್ವರನ್ 16, ಅನುಸ್ಟುಪ್ ಮಜುಂದಾರ್ 61, ಮನೋಜ್ ತಿವಾರಿ ಬ್ಯಾಟಿಂಗ್ 57, ಶಹಬಾಜ್ ಅಹಮದ್ ಬ್ಯಾಟಿಂಗ್ 13, ಜೈದೇವ್ ಉನದ್ಕತ್ 47ಕ್ಕೆ 2, ಚೇತನ್ ಸಕಾರಿಯಾ 50ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.