ಸಿಡ್ನಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಯುವ ಬ್ಯಾಟರ್ ಶಫಾಲಿ ವರ್ಮಾ ಮತ್ತು ಎಡಗೈ ಸ್ಪಿನ್ನರ್ ರಾಧಾ ಯಾದವ್ ಅವರು ಮಹಿಳೆಯರ ಬಿಗ್ ಬ್ಯಾಷ್ ಲೀಗ್ಗೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಎರಡು ಬಾರಿಯ ಚಾಂಪಿಯನ್ ಸಿಡ್ನಿ ಸಿಕ್ಸರ್ ತಂಡದ ಪರ ಅವರಿಬ್ಬರು ಆಡಲಿದ್ದಾರೆ ಎಂದು ಸಂಘಟಕರು ಸೋಮವಾರ ಖಚಿತಪಡಿಸಿದ್ದಾರೆ.

ಏಳನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ ತಂಡ ಮೆಲ್ಬರ್ನ್ ಸ್ಟಾರ್ಸ್ ಎದುರು ಸೆಣಸಲಿದೆ. ಈ ಪಂದ್ಯ ಅಕ್ಟೋಬರ್ 14ರಂದು ಹೋಬರ್ಟ್ನಲ್ಲಿ ನಡೆಯಲಿದೆ.

17 ವರ್ಷದ ಶಫಾಲಿ 2010ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಈ ಮೂಲಕ ಅಂತರರಾಷ್ಟ್ರೀಯ ಪಂದ್ಯ ಆಡಿದ ಅತಿ ಸಣ್ಣ ವಯಸ್ಸಿನ ಭಾರತದ ಆಟಗಾರ್ತಿ ಎನಿಸಿಕೊಂಡಿದ್ದರು. ಜಗತ್ತಿನ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರು ಎಂದೆನಿಸಿಕೊಂಡಿರುವ ಅವರು ಈಗ ಐಸಿಸಿ ಮಹಿಳಾ ರ್ಯಾಂಕಿಂಗ್ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದಾರೆ. ಅಲಿಸಾ ಹೀಲಿ, ಎಲಿಸ್ ಪೆರಿ ಮತ್ತು ಆ್ಯಶ್ ಗಾರ್ಡನರ್ ಅವರೊಂದಿಗೆ ಸಿಕ್ಸರ್ಸ್ನ ಅಗ್ರ ಕ್ರಮಾಂಕಕ್ಕೆ ಅವರು ಬಲ ತುಂಬುವ ನಿರೀಕ್ಷೆ ಇದೆ.

ರಾಧಾ ಯಾದವ್ ಟಿ20 ಆಟಗಾರ್ತಿಯರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದ್ದಾರೆ. 2018ರ ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಅವರು ಅಗ್ರ ಸ್ಥಾನ ಹಂಚಿಕೊಂಡಿದ್ದರು. ಐದು ಪಂದ್ಯಗಳಲ್ಲಿ ಅವರು ಎಂಟು ವಿಕೆಟ್ ಉರುಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.