ನವದೆಹಲಿ: ಮಹಿಳೆಯರ ಐತಿಹಾಸಿ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೂ ಮೊದಲು ಭಾರತದಲ್ಲಿ ದೇಶಿ ಮಟ್ಟದ ಪಿಂಕ್ ಬಾಲ್ ಪಂದ್ಯಗಳನ್ನು ಆಯೋಜಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಪೆಕ್ಸ್ ಸಮಿತಿ ಸದಸ್ಯೆ ಶಾಂತಾ ರಂಗಸ್ವಾಮಿ ಸಲಹೆ ನೀಡಿದ್ದಾರೆ.

ಈ ಕುರಿತು ಮಂಡಳಿಯ ಪದಾಧಿಕಾರಿಗಳು ಒಳಗೊಂಡಂತೆ ಸಹೋದ್ಯೋಗಿಗಳಿಗೆ ಪತ್ರ ಬರೆದಿರುವ ಅವರು ಕೊರೊನಾದಿಂದಾಗಿ ಕ್ರಿಕೆಟ್ ನಡೆಯದೇ ಇದ್ದ ದಿನಗಳ ಬದಲಿಗೆ ಇತರ ಪಂದ್ಯಗಳನ್ನು ಆಯೋಜಿಸುವಂತೆಯೂ ಸೂಚಿಸಿದ್ದಾರೆ.

ಸೆಪ್ಟೆಂಬರ್ 30ರಿಂದ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಹಗಲು ರಾತ್ರಿ ಪಂದ್ಯ ನಡೆಯಲಿದೆ. ಪುರುಷರ ತಂಡ ಈಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಹಗಲು ರಾತ್ರಿ ಟೆಸ್ಟ್ನಲ್ಲಿ ಹೀನಾಯವಾಗಿ ಸೋತಿತ್ತು. ಮಹಿಳೆಯರು ಇಂಥ ಪರಿಸ್ಥಿತಿಗೆ ಒಳಗಾಗದಿರಬೇಕಾದರೆ ದೇಶಿ ಮಟ್ಟದಲ್ಲಿ ಸಾಕಷ್ಟು ಪಂದ್ಯಗಳನ್ನು ಆಡಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.