ಮೆಲ್ಬೋರ್ನ್ನಲ್ಲಿ ನಡೆದ ಪಾಕಿಸ್ತಾನದ ವಿರುದ್ಧ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ ತಂದುಕೊಟ್ಟ ವಿರಾಟ್ ಕೊಹ್ಲಿ ಅಂತರರಾಷ್ಟ್ರೀಯ ಚುಟುಕು ಕ್ರಿಕೆಟ್ನಿಂದ ನಿವೃತ್ತರಾಗಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಕ್ತರ್ ಬಯಸಿದ್ದಾರೆ.

ಕೊಹ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಚುಟುಕು ಪಂದ್ಯಗಳಿಗೆ ವಿನಿಯೋಗಿಸಕೂಡದು ಎಂಬುದೇ ರಾವಲ್ಪಿಂಡಿ ಎಕ್ಸ್ಪ್ರೆಸ್ ಖ್ಯಾತಿಯ ಅಕ್ತರ್ ಅವರ ವಿಚಿತ್ರ ಬಯಕೆಯ ಹಿಂದಿನ ಆಶಯವಾಗಿದೆ.

ಪಾಕಿಸ್ತಾನದ ವಿರುದ್ಧ ಕೊಹ್ಲಿ ತನ್ನ ಜೀವನದ ಅತ್ಯಂತ ಅದ್ಭುತ ಇನ್ನಿಂಗ್ಸ್ ಆಡಿದರು. ಕಾರಣ, ತನ್ನಿಂದ ಸಾಧ್ಯ ಎಂಬ ಸ್ವಯಂ ನಂಬಿಕೆ ಅವರಲ್ಲಿ ಇದ್ದುದರಿಂದ ಈ ರೋಚಕ ಆಟವನ್ನು ಆಡಿದರು ಎಂದು ಶೋಯಬ್ ಅಕ್ತರ್ ಹೇಳಿದ್ದಾರೆ.

'ಅಪ್ಪಳಿಸಿದಂತೆ ಮೊದಲಿನ ಆಟಕ್ಕೆ ವಾಪಸ್ ಆಗಿದ್ದಾರೆ. ಅವರು (ಕೊಹ್ಲಿ) ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ನಿವೃತ್ತರಾಗಲಿ ಎಂದು ಬಯಸುತ್ತೇನೆ. ಅವರ ಇಡೀ ಸಾಮರ್ಥ್ಯವನ್ನು ಚುಟುಕು ಪಂದ್ಯಗಳಿಗೆ ವಿನೋಗಿಸುವುದು ಬೇಡ. ಅಂತಹದ್ದೇ ಬದ್ಧತೆಯೊಂದಿಗೆ ಆಟವಾಡಿದರೆ ಏಕದಿನ ಪಂದ್ಯದಲ್ಲಿ ತ್ರಿಶತಕ ಬಾರಿಸಬಲ್ಲರು' ಎಂದು ಅಕ್ತರ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ 3 ವರ್ಷ ಕಳಪೆ ಪ್ರದರ್ಶನ ತೋರಿದ್ದರು. ರನ್ಗಳನ್ನು ಗಳಿಸಿರಲಿಲ್ಲ. ನಾಯಕತ್ವವನ್ನು ಬಿಟ್ಟುಕೊಡಬೇಕಾಯಿತು. ಹೆಚ್ಚಿನ ಮಂದಿ ಅವರ ಬಗ್ಗೆ ಏನೇನೋ ಮಾತನಾಡಿಕೊಂಡರು. ಅವರ ಕುಟುಂಬ ಸದಸ್ಯರನ್ನು ಈ ವಿಚಾರದಲ್ಲಿ ಎಳೆದುತಂದು ಆಡಿಕೊಂಡರು. ಆದರೆ ಸತತ ಪ್ರಯತ್ನದ ಮೂಲಕ ದೀಪಾವಳಿ ಹಬ್ಬದ ಮೊದಲ ದಿನ ಪಟಾಕಿಯಂತೆ ಅಬ್ಬರಿಸಿದರು. ಯಾವಾಗ, ಯಾವ ಸ್ಥಳದಲ್ಲಿ ತನ್ನ ಶ್ರೇಷ್ಠ ಆಟಕ್ಕೆ ವಾಪಸ್ ಬರಬೇಕು ಎಂಬುದನ್ನು ಕೊಹ್ಲಿ ಮೊದಲೇ ನಿರ್ಧರಿಸಿದ್ದರು ಎಂದಿದ್ದಾರೆ.

ಕಿಂಗ್ ಈಸ್ ಬ್ಯಾಕ್. ಅಪ್ಪಳಿಸುವ ರೀತಿಯಲ್ಲಿ ವಾಪಸ್ ಆಗಿದ್ದಾರೆ. ನನಗೆ ಕೊಹ್ಲಿ ಬಗ್ಗೆ ತುಂಬ ಸಂತೋಷವಾಗುತ್ತಿದೆ. ಅವರು ಅದ್ಭುತ ಕ್ರಿಕೆಟ್ ಆಟಗಾರ ಎಂದು ಅಕ್ತರ್ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.