ಪುಣೆ: ಕಿವೀಸ್ ಸ್ಪಿನ್ನರ್ ಮಿಚೆಲ್ ಸ್ಯಾಂಟನರ್ ಅವರಿಗೆ ಭಾರತ ತಂಡದ ಬ್ಯಾಟಿಂಗ್ ಚಾಂಪಿಯನ್ ವಿರಾಟ್ ಕೊಹ್ಲಿ ಅವರ ವಿಕೆಟ್ ಗಳಿಸಿದ ಖುಷಿಯ ಜೊತೆಗೆ ಅಚ್ಚರಿಯನ್ನೂ ಮೂಡಿಸಿದೆ.

‘ಕೊಹ್ಲಿ ಅವರು ಫುಲ್ಟಾಸ್ ಎಸೆತಕ್ಕೆ ಔಟಾಗಿದ್ದು ನನಗ ಬಹಳ ಆಶ್ಚಯವಾಗಿದೆ. ಅಂತಹ ಎಸೆತಗಳನ್ನು ಅವರು ಎಂದಿಗೂ ತಪ್ಪುವುದಿಲ್ಲ’ ಎಂದು ಸ್ಯಾಂಟನರ್ ಅವರು ದಿನದಾಟದ ನಂತರದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗಾಳಿಯಲ್ಲಿ ತುಸು ನಿಧಾನಗತಿಯಲ್ಲಿದ್ದ ಎಸೆತ ಅದು. ವೇಗದಲ್ಲಿ ಒಂಚೂರು ವ್ಯತ್ಯಾಸ ಮಾಡಿದ್ದೆ. ಅಂತಹ ಎಸೆತಗಳನ್ನು ಸಿಕ್ಸರ್ಗೆತ್ತಲು ಬ್ಯಾಟರ್ಗಳು ಪ್ರಯತ್ನಿಸುತ್ತಾರೆ. ಆದರೆ ಇಲ್ಲಿ ವಿಕೆಟ್ ಒಲಿಯಿತು’ ಎಂದು ವಿವರಿಸಿದರು.

ಪ್ರೇಕ್ಷಕರಿಗೆ ನೀರಿನ ವ್ಯವಸ್ಥೆ

ಟೆಸ್ಟ್ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಬಂದಿದ್ದ ವೀಕ್ಷಕರಿಗೆ ಎರಡನೇ ದಿನವಾದ ಶುಕ್ರವಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.

ಮೊದಲ ದಿನ ನೀರಿನ ಸಮಸ್ಯೆಯಿಂದಾಗಿ ದೊಡ್ಡ ಗೊಂದಲವೇ ಆಗಿತ್ತು. ಆಯೋಜಕರು ಮತ್ತು ಪ್ರೇಕ್ಷಕರ ನಡುವೆ ಮಾತಿನ ಚಕಮಕಿ ಕೂಡ ನಡೆದಿತ್ತು. ಆದರೆ ಎರಡನೇ ದಿನ ಆಯೋಜಕರು 3800 ಬಾಟಲಿಗಳಷ್ಟು (20 ಲೀಟರ್ ಪ್ರತಿ ಬಾಟಲಿ) ನೀರು ತರಿಸಿದ್ದರು. ಇದಲ್ಲದೇ 500 ಕ್ಯಾನ್ಗಳನ್ನು ಮೀಸಲು ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.