ನವದೆಹಲಿ: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಇಂಗ್ಲೆಂಡ್ ವಿರುದ್ಧ ಸೋಲುತ್ತಲೇ ಟ್ವಿಟರ್‌ನಲ್ಲಿ ಬೇಸರ ಹಂಚಿಕೊಂಡಿದ್ದ ಪಾಕ್‌ನ ಮಾಜಿ ವೇಗದ ಬೌಲರ್ ಶೋಯಬ್ ಅಖ್ತರ್ ಅವರನ್ನು ಭಾರತದ ವೇಗಿ ಮೊಹಮ್ಮದ್ ಶಮಿ ಕೆಣಕಿದ್ದಾರೆ.

ಫೈನಲ್‌ಲ್ಲಿ ಪಾಕಿಸ್ತಾನ ವಿರುದ್ಧ ಐದು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಇಂಗ್ಲೆಂಡ್ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತು.

ಪಂದ್ಯದ ಫಲಿತಾಂಶದ ನಂತರ ಅಖ್ತರ್ ಅವರು ‘ಛಿದ್ರ ಹೃದಯ’ದ ಇಮೋಜಿಯನ್ನು ಪ್ರಕಟಿಸಿದ್ದರು.

ಅಖ್ತರ್ ಮಾಡಿದ್ದ ಟ್ವೀಟ್ ಅನ್ನು ರೀಟ್ವೀಟ್ ಮಾಡಿರುವ ಶಮಿ ‘ಸಾರಿ ಬ್ರದರ್, ಇದನ್ನೇ ಕರ್ಮ ಎನ್ನುವುದು...’ ಎಂದು ಗೇಲಿ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಒಂದೇ ಒಂದು ವಿಕೆಟನ್ನೂ ಪಡೆಯದೇ ಸೋತ ಭಾರತವನ್ನು ಅಖ್ತರ್ ಈ ಹಿಂದೆ ಲೇವಡಿ ಮಾಡಿದ್ದರು.

ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್ ತಂಡವನ್ನು ಸೋಲಿಸಿ ಸೆಮಿಫೈನಲ್ ತಲುಪುವುದು ದೊಡ್ಡ ಸಾಧನೆಯೆ ಎಂದು ಅವರು ಭಾರತವನ್ನು ಮೂದಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.