ಕರಾಚಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಐಸಿಸಿಗೆಪ್ರಸ್ತಾವನೆ ಸಲ್ಲಿಸಿರುವ ಚತುಷ್ಕೋನ ಕ್ರಿಕೆಟ್ ಸರಣಿ ಆಯೋಜನೆ ‘ಫ್ಲಾಪ್’ ಆಗುವ ಯೋಜನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಲೇವಡಿ ಮಾಡಿದ್ದಾರೆ.

‘ಈ ತರಹದ ಸರಣಿಯನ್ನು ಆಡುವ ಮೂಲಕ ನಾಲ್ಕು ದೇಶಗಳು ಸೇರಿ ಉಳಿದ ಐಸಿಸಿ ಸದಸ್ಯ ದೇಶಗಳನ್ನು ತುಳಿಯುವ ಹುನ್ನಾರ ಇದೆ. ಇದು ಒಳ್ಳೆಯದಲ್ಲ. ಬಿಗ್ ತ್ರೀ ದೇಶಗಳು ಕ್ರಿಕೆಟ್ ಮೇಲೆ ಹಿಡಿತ ಸಾಧಿಸುವ ಈ ಯೋಚನೆಯು ಸರಿಯಲ್ಲ’ ಎಂದು ಯೂಟ್ಯೂಬ್ ವಿಡಿಯೋದಲ್ಲಿ ಅವರು ಟೀಕಿಸಿದ್ದಾರೆ. ಹೋದ ವಾರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ನಾಲ್ಕು ದೇಶಗಳ ಕ್ರಿಕೆಟ್ ಟೂರ್ನಿಯ ಆಯೋಜನೆಯ ಕುರಿತು ಮಾತನಾಡಿದ್ದರು.

ಮಂಗಳವಾರ ಪ್ರತಿಕ್ರಿಯಿಸಿದ್ದ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಕೂಡ, ಚತುಷ್ಕೋನ ಟೂರ್ನಿ ಆಯೋಜನೆ ಕುರಿತು ಐಸಿಸಿಯೊಂದಿಗೆ ಚರ್ಚಿಸಲು ಸಿದ್ಧ ಎಂದು ಹೇಳಿತ್ತು. ಗಂಗೂಲಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಖಜಾಂಚಿ ಅರುಣ್ ಧುಮಾಲ್ ಅವರ ನಿಯೋಗವು ಈಚೆಗೆ ಲಂಡನ್ನಲ್ಲಿ ಇಸಿಬಿಯ ಮುಖ್ಯಸ್ಥ ಕಾಲಿನ್ ಗ್ರೇವ್ಸ್ ಅವರೊಂದಿಗೆ ಚರ್ಚೆ ಮಾಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.