ಸೌತಾಂಪ್ಟನ್, ಇಂಗ್ಲೆಂಡ್: ಶ್ರೀಲಂಕಾ ತಂಡ, ಆತಿಥೇಯ ಇಂಗ್ಲೆಂಡ್ ತಂಡವನ್ನು ಅಚ್ಚರಿಯ ರೀತಿ ಸೋಲಿಸುವ ಮೂಲಕ ಇತರ ತಂಡಗಳಿಗೂ ವಿಶ್ವಕಪ್ ಸೆಮಿಫೈನಲ್ ಅವಕಾಶ ಜೀವಂತವಾಗಿರುವಂತೆ ಮಾಡಿದೆ ಎಂದು ದ್ವೀಪ ರಾಷ್ಟ್ರದ ಮಾಜಿ ನಾಯಕ ಮಹೇಲ ಜಯವರ್ಧನೆ ಅಭಿಪ್ರಾಯಪಟ್ಟಿದ್ದಾರೆ.

ಟೂರ್ನಿಯ ಮಧ್ಯಮ ಹಂತದವರೆಗೆ 10 ತಂಡಗಳ ಈ ಟೂರ್ನಿಯಲ್ಲಿ ಸೆಮಿಫೈನಲ್ ತಲುಪುವ ತಂಡಗಳು ಯಾವುವು ಎಂಬುದನ್ನು ಊಹಿಸಲು ಅವಕಾಶವಿತ್ತು. ಮೇಲ್ನೋಟಕ್ಕೆ ಏಕದಿನ ರ್ಯಾಂಕಿಂಗ್ನಲ್ಲಿ ಮೊದಲ ಮೂರು ಸ್ಥಾನ ಪಡೆದ ತಂಡಗಳ ಜೊತೆ ಆಸ್ಟ್ರೇಲಿಯಾ ಮುನ್ನಡೆಯುವಂತೆ ಕಂಡಿತ್ತು.

ಆದರೆ, ಹಳೆಯ ಹುಲಿ ಲಸಿತ್ ಮಾಲಿಂಗ್ ಅವರ ನಾಲ್ಕು ವಿಕೆಟ್ಗಳ ಅಮೋಘ ಸಾಧನೆಯಿಂದ ಸಾಧಾರಣ ಮೊತ್ತ ಕಂಡ ಪಂದ್ಯದಲ್ಲಿ 1996ರ ಚಾಂಪಿಯನ್ ಶ್ರೀಲಂಕಾ ತಂಡ, ಇಂಗ್ಲೆಂಡ್ ಮೇಲೆ ಜಯಳಿಸಿದ್ದು, ಆತಿಥೇಯರ ಸೆಮಿಫೈನಲ್ ಅವಕಾಶದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಇಂಗ್ಲೆಂಡ್ ಆರು ಪಂದ್ಯಗಳಿಂದ ಎಂಟು ಆಂಕ ಗಳಿಸಿದ್ದು ಈಗಲೂ ಮೂರನೇ ಸ್ಥಾನದಲ್ಲಿದೆ. ಆದರೆ ಗ್ರೂಪ್ ಹಂತದ ಕೊನೆಯ ಮೂರು ಪಂದ್ಯಗಳಲ್ಲಿ ಪ್ರಬಲ ತಂಡಗಳಾದ ಆಸ್ಟ್ರೇಲಿಯಾ, ಭಾರತ, ನ್ಯೂಜಿಲೆಂಡ್ ವಿರುದ್ಧ ಆಡಬೇಕಾಗಿದೆ. 1992ರ ನಂತರ ಇಂಗ್ಲೆಂಡ್ ವಿಶ್ವಕಪ್ನಲ್ಲಿ ಈ ತಂಡಗಳನ್ನು ಸೋಲಿಸಿಲ್ಲ ಎಂಬುದು ಗಮನಾರ್ಹ.

‘ಇದು ಶ್ರೀಲಂಕಾಕ್ಕೆ ದೊಡ್ಡ ಗೆಲುವು. ವಿಶ್ವಕಪ್ಗೂ ಸಹ ಗೆಲುವು. ಸೆಮಿಫೈನಲ್ ಅವಕಾಶಗಳು ಸ್ವಲ್ಪವೇ ತೆರೆದುಕೊಳ್ಳತೊಡಗಿವೆ’ ಎಂದು ಐಸಿಸಿಗೆ ಬರೆದಿರುವ ಅಂಕಣದಲ್ಲಿ ಜಯವರ್ಧನೆ ವಿಶ್ಲೇಷಿಸಿದ್ದಾರೆ.

ಮೊದಲ ನಾಲ್ಕು ಸ್ಥಾನದಲ್ಲಿರುವ ತಂಡಗಳಲ್ಲಿ ಕೆಲವು ಮುಂದಿನ ಪಂದ್ಯಗಳಲ್ಲಿ ಸಹಜವಾಗಿ ಪಾಯಿಂಟ್ಗಳನ್ನು ಕಳೆದುಕೊಳ್ಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.