ಬೆಂಗಳೂರು: ಇಸ್ರೇಲ್ ಹಾಗೂ ಹಮಾಸ್ ನಡುವಣ ಯುದ್ಧದಲ್ಲಿ ಅಪಾರ ಪ್ರಾಣಹಾನಿ ಸಂಭವಿಸಿದೆ. ಗಾಜಾಪಟ್ಟಿಯಲ್ಲಿ ಅನೇಕ ಮಕ್ಕಳು ಸಾವಿಗೀಡಾಗಿದ್ದಾರೆ.

ಈ ಕುರಿತು ಧ್ವನಿ ಎತ್ತಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್, ಯುದ್ಧ ನಿಲ್ಲಿಸುವ ನಿಟ್ಟಿನಲ್ಲಿ ವಿಶ್ವ ನಾಯಕರು ತಕ್ಷಣ ಕಾರ್ಯಪ್ರವೃತರಾಗಬೇಕು ಎಂದು ಬೇಡಿಕೊಂಡಿದ್ದಾರೆ.

ಪ್ರತಿದಿನ, ಗಾಜಾದಲ್ಲಿ 0-10 ವರ್ಷ ವಯಸ್ಸಿನ ಮುಗ್ಧ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದರೆ ಇಡೀ ಜಗತ್ತೇ ಮೌನವಾಗಿದೆ. ಒಬ್ಬ ಕ್ರೀಡಾಪಟುವಾಗಿ ನನಗೆ ನನ್ನ ಅಭಿಪ್ರಾಯ ಮಂಡಿಸಲು ಮಾತ್ರ ಸಾಧ್ಯ. ಆದರೆ ವಿಶ್ವ ನಾಯಕರು ಒಂದಾಗಿ ಈ ಪ್ರಜ್ಞಾಹೀನ ಹತ್ಯೆಯನ್ನು ತಕ್ಷಣ ಕೊನೆಗಾಣಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧದಲ್ಲಿ ಇಲ್ಲಿಯವರೆಗೆ 18 ವರ್ಷದೊಳಗಿನ 3,760 ಪ್ಯಾಲೆಸ್ಟೀನ್ ಮಕ್ಕಳು ಮೃತಪಟ್ಟಿದ್ದಾರೆ ಎಂದು ಗಾಜಾ ಪಟ್ಟಿಯ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.