ದುಬೈ: ಮುಂಬರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಅಕ್ಟೋಬರ್ 24ರಂದು ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಅಭಿಮಾನಿಗಳಲ್ಲೂ ಈಗಿನಿಂದಲೇ ರೋಚಕತೆ ಮನೆ ಮಾಡಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.

ಈ ನಡುವೆ ಐಸಿಸಿ ವಿಶ್ವಕಪ್ನ ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್, ಹೊಚ್ಚ ಹೊಸ 'ಮೌಕಾ ಮೌಕಾ' ಜಾಹೀರಾತನ್ನು ಬಿಡುಗಡೆಗೊಳಿಸಿದೆ.

ಇದನ್ನೂ ಓದಿ:T20 WC: ಟೀಮ್ ಇಂಡಿಯಾದಲ್ಲಿ ಬದಲಾವಣೆ; ಅಕ್ಷರ್ ಸ್ಥಾನಕ್ಕೆ ಶಾರ್ದೂಲ್ ಆಯ್ಕೆ

ವಿಶ್ವಕಪ್ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಎಂದೂ ಗೆದ್ದಿಲ್ಲ. ಇದನ್ನೇ ಬೊಟ್ಟು ಮಾಡಿಕೊಂಡು ಪಾಕಿಸ್ತಾನಕ್ಕೆ ಮತ್ತೊಂದು ಅವಕಾಶ ಎಂಬುದನ್ನು ಜಾಹೀರಾತಿನಲ್ಲಿ ಬಿಂಬಿಸಲಾಗಿದೆ.

ಹಳೆಯ ಜಾಹೀರಾತಿನಲ್ಲಿದ್ದ ಪಾಕಿಸ್ತಾನದ ಅದೇ ಅಭಿಮಾನಿಯನ್ನು ಪ್ರದರ್ಶಿಸಲಾಗಿದೆ. ಜಾಹೀರಾತಿನಲ್ಲಿ ಪಟಾಕಿಗಳೊಂದಿಗೆ ಕಾಣಿಸುವ ಪಾಕ್ ಅಭಿಮಾನಿ ದುಬೈ ಮಾಲ್ಗೆ ಟಿ.ವಿ ಖರೀದಿಸಲು ಬರುತ್ತಾರೆ. ಭಾರತವನ್ನು ಪ್ರತಿನಿಧಿಸುವ ಸರ್ದಾರ್, ಟಿ.ವಿ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ಸಂಭಾಷಣೆಯ ಮೂಲಕ ಪರಸ್ಪರ ಕಾಲೆಳೆಯಲು ಪ್ರಯತ್ನಿಸುತ್ತಾರೆ.

ಅತಿ ದೊಡ್ಡ ಟಿ.ವಿ ಖರೀದಿಸಲು ಬಂದ ಪಾಕ್ ಅಭಿಮಾನಿ, ಈ ಬಾರಿ ಬಾಬರ್, ರಿಜ್ವಾನ್ ಸಿಕ್ಸರ್ಗೆ ದೆಹಲಿಯ ಗಾಜುಗಳು ಪುಡಿಪುಡಿಯಾಗಲಿವೆ ಎಂದು ಕಿಚಾಯಿಸುತ್ತಾರೆ. ಇದಕ್ಕೆ ಉತ್ತರಿಸುವ ಭಾರತೀಯ ಅಭಿಮಾನಿ, ಎರಡು ಟಿ.ವಿಗಳನ್ನು ನೀಡಿ 'ಬಯ್ ಒನ್ ಬ್ರೇಕ್ ಒನ್ ಫ್ರೀ' ಎಂದು ಕಾಲೆಳೆಯುತ್ತಾರೆ.

ಅಂದ ಹಾಗೆ ವಿಶ್ವಕಪ್ನಲ್ಲಿ 12 ಸಲವೂ ಪಾಕಿಸ್ತಾನ ವಿರುದ್ಧ ಭಾರತ ಗೆಲುವು ದಾಖಲಿಸಿದೆ. ಈ ಪೈಕಿ ಟಿ20 ವಿಶ್ವಕಪ್ನಲ್ಲಿ ಐದು ಬಾರಿ ಜಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.