ಸೇಂಟ್ ಲೂಸಿಯಾ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಸೂಪರ್ ಎಂಟರ ಹಂತದ ಎರಡನೇ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಏಳು ರನ್ ಅಂತರದ ಸೋಲಿಗೆ ಶರಣಾಗಿರಬಹುದು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಅದ್ಭುತ ರನೌಟ್ ಹಾಗೂ ಕ್ಯಾಚ್ ಪಡೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿಕಾಕ್ ಅವರ ಬಿರುಸಿನ ಅರ್ಧಶತಕದ (65 ರನ್, 38 ಎಸೆತ) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತು. ಕ್ವಿಂಟನ್ ಇನಿಂಗ್ಸ್ನಲ್ಲಿ ತಲಾ ನಾಲ್ಕು ಸಿಕ್ಸರ್ ಹಾಗೂ ಬೌಂಡರಿ ಸೇರಿತ್ತು. ಡೇವಿಡ್ ಮಿಲ್ಲರ್ ಸಹ 43 ರನ್ಗಳ ಉಪಯುಕ್ತ ಕಾಣಿಕೆ ನೀಡಿದರು.

ಈ ಗುರಿ ಬೆನ್ನಟ್ಟಿದ ಆಂಗ್ಲರ ಪಡೆ ಹ್ಯಾರಿ ಬ್ರೂಕ್ (53 ರನ್, 37 ಎಸೆತ, 7 ಬೌಂಡರಿ) ದಿಟ್ಟ ಹೋರಾಟದ ಹೊರತಾಗಿಯೂ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಲಷ್ಟೇ ಸಾಧ್ಯವಾಯಿತು.

'ಸೂಪರ್ಮ್ಯಾನ್ ಬಟ್ಲರ್'...

ಅಗ್ರ ಕ್ರಮಾಂಕದ ಬ್ಯಾಟರ್ಗಳ ವೈಫಲ್ಯವು ಇಂಗ್ಲೆಂಡ್ಗೆ ಹಿನ್ನಡೆಯಾಗಿ ಪರಿಣಮಿಸಿತು. ನಾಯಕ ಬಟ್ಲರ್ 17 ರನ್ ಗಳಿಸಿ ಔಟ್ ಆದರು. ಬಟ್ಲರ್ ಬ್ಯಾಟ್ ಸದ್ದು ಮಾಡದೇ ಇರಬಹುದು. ಆದರೆ ವಿಕೆಟ್ ಹಿಂದುಗಡೆ ನಿಂತು ಅದ್ಭುತ ರನೌಟ್ ಹಾಗೂ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.

ದಕ್ಷಿಣ ಆಫ್ರಿಕಾ ಇನಿಂಗ್ಸ್ ವೇಳೆ ಬಿರುಸಿನ ಆಟವಾಡುತ್ತಿದ್ದ ಡಿಕಾಕ್ ಅವರನ್ನು ಪೆವಿಲಿಯನ್ಗೆ ಅಟ್ಟಲು ಬಟ್ಲರ್ ನಿರ್ಣಾಯಕ ಪಾತ್ರ ವಹಿಸಿದರು. ಜೋಫ್ರಾ ಆರ್ಚರ್ ಎಸೆದ ಇನಿಂಗ್ಸ್ನ 12ನೇ ಓವರ್ನಲ್ಲಿ ಡಿಕಾಕ್ ಬ್ಯಾಟ್ಗೆ ಸವರಿದ ಚೆಂಡನ್ನು ತನ್ನ ಎಡಬದಿಯತ್ತ ಡೈವ್ ಹೊಡೆದ ಬಟ್ಲರ್, ಭದ್ರವಾಗಿ ಹಿಡಿದರು. ಆ ಮೂಲಕ ಡಿಕಾಕ್ ಸ್ಫೋಟಕ ಆಟಕ್ಕೆ ಅಂತ್ಯ ಹಾಡಿದರು.

ಇದರ ಬೆನ್ನಲ್ಲೇ ಒಂದು ರನ್ ಕದಿಯಲು ಯತ್ನಿಸಿದ ಹೆನ್ರಿಚ್ ಕ್ಲಾಸೆನ್ ಅವರಿಗೂ ನೇರ ಥ್ರೋ ಮೂಲಕ ರನೌಟ್ ಮಾಡುವ ಮೂಲಕ ಬಟ್ಲರ್, ಪೆವಿಲಿಯನ್ ಹಾದಿ ತೋರಿಸಿದರು. ಚಾಣಾಕ್ಷತನ ಮೆರೆದ ಬಟ್ಲರ್, ಕ್ಷಣಾರ್ಧದಲ್ಲಿ ಚೆಂಡನ್ನು ನಾನ್-ಸ್ಟ್ರೈಕರ್ ವಿಕೆಟ್ಗೆ ನೇರ ಥ್ರೋ ಮಾಡುವ ರನೌಟ್ ಮಾಡುವಲ್ಲಿ ಯಶಸ್ವಿಯಾದರು.

ಮಾರ್ಕರಮ್ ಅದ್ಭುತ ಕ್ಯಾಚ್...

ಇದೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕರಮ್ ಅದ್ಭುತ ಕ್ಯಾಚ್ ಪಡೆಯುವ ಮೂಲಕ ಗಮನ ಸೆಳೆದರು. ಪಂದ್ಯದ ರೋಚಕ ಹಂತದಲ್ಲಿ ಹೆನ್ರಿಚ್ ನಾಕಿಯಾ ಅವರ ದಾಳಿಯಲ್ಲಿ ಬಿರುಸಿನ ಆಟವಾಡುತ್ತಿದ್ದ ಇಂಗ್ಲೆಂಡ್ ಬ್ಯಾಟರ್ ಹ್ಯಾರಿ ಬ್ರೂಕ್ ಅವರನ್ನು ಔಟ್ ಮಾಡುವಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕರಮ್ ನಿರ್ಣಾಯಕ ಪಾತ್ರ ವಹಿಸಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಲು ನೆರವಾಯಿತು.

ದಕ್ಷಿಣ ಆಫ್ರಿಕಾ ಅಜೇಯ ಓಟ...

ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ದಕ್ಷಿಣ ಆಫ್ರಿಕಾ, ಸೂಪರ್ ಎಂಟರ ಹಂತದ ಎರಡನೇ ಗುಂಪಿನಲ್ಲಿ ಸತತ ಎರಡು ಗೆಲುವು ದಾಖಲಿಸಿದೆ. ಅಲ್ಲದೆ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲು ಕಂಡಿದ್ದು, ಎರಡನೇ ಸ್ಥಾನದಲ್ಲಿದೆ.

ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಗೆ ರೋಚಕ ಜಯ; ಮ್ಯಾಚ್ ಹೈಲೈಟ್ಸ್ ಇಲ್ಲಿ ನೋಡಿ

ಬಟ್ಲರ್ ಮ್ಯಾಜಿಕ್...
.T20 WC SA v ENG |ಡಿಕಾಕ್ ಅಬ್ಬರ: ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಜಯ.ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ; ಗೌತಮ್ ಗಂಭೀರ್ ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.