ಶಾರ್ಜಾ: 40ರ ಅಂಚಿನ ಹರೆಯದಲ್ಲೂ ಪಾಕಿಸ್ತಾನ ತಂಡದ ಅವಿಭಾಜ್ಯ ಅಂಗವಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುತ್ತಿರುವ ಶೋಯಬ್ ಮಲಿಕ್ ಅವರ ಯಶಸ್ಸಿನ ಗುಟ್ಟೆಂದರೆ ನಿರಂತರ ತರಬೇತಿ, ಫಿಟ್‌ನೆಸ್ ಹಾಗೂ ಆಟದ ಮೇಲಿನ ಪ್ರೀತಿ.

ಇನ್ನೂ ಮೂರು ತಿಂಗಳ ಬಳಿಕ 40ನೇ ವಯಸ್ಸಿಗೆ ಕಾಲಿಡಲಿರುವ ಮಲಿಕ್, ಭಾನುವಾರ ಸ್ಕಾಟ್ಲೆಂಡ್ ಎದುರಿನ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಅಬ್ಬರಿಸಿದ್ದರು. 18 ಎಸೆತಗಳಲ್ಲಿ 54 ರನ್ ಸಿಡಿಸಿದ್ದ ಅವರ ಆಟದ ಬಲದಿಂದ ತಂಡವು 72 ರನ್‌ಗಳಿಂದ ಗೆಲುವು ಸಾಧಿಸಿತ್ತು.

ಮಲಿಕ್ 20 ವರ್ಷಗಳಿಗಿಂತ ಅಧಿಕ ಕಾಲ ತಂಡದಲ್ಲಿದ್ದಾರೆ. ಅವರು ಪದಾರ್ಪಣೆ ಮಾಡಿದ ಹೊತ್ತಿನಲ್ಲಿ ಈಗಿನ ತಾರಾ ವೇಗಿ ಶಹೀನ್ ಶಾ ಆಫ್ರಿದಿ ಸೇರಿದಂತೆ ಕೆಲವು ಆಟಗಾರರು ಜನಿಸಿರಲಿಲ್ಲ.

ಇದನ್ನೂ ಓದಿ:T20 WC: ಬಾಬರ್, ಮಲಿಕ್ ಅಬ್ಬರ; ಪಾಕ್ಗೆ ಸತತ 5ನೇ ಗೆಲುವು

‘ನಾನು ಯಾವಾಗಲೂ ಫಿಟ್ ಆಗಿರಲು ಯೋಚಿಸುತ್ತೇನೆ. ಕ್ರಿಕೆಟ್ ಆಟವನ್ನು ಈಗಲೂ ಆಸ್ವಾದಿಸುತ್ತೇನೆ. ಅಂತಿಮವಾಗಿ ಇದರಿಂದ ನನಗೆ ಹಾಗೂ ತಂಡಕ್ಕೆ ಅನುಕೂಲವಾಗುತ್ತದೆ‘ ಎಂದು ಸ್ಕಾಟ್ಲೆಂಡ್ ಎದುರಿನ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಲಿಕ್ ತಿಳಿಸಿದರು.

ಮಲಿಕ್ ಅವರು ಭಾನುವಾರ ಸಿಡಿಸಿದ್ದ ಅರ್ಧಶತಕವು ಈ ಬಾರಿಯ ಟೂರ್ನಿಯ ಜಂಟಿ ಅತಿವೇಗದ ಅರ್ಧಶತಕವಾಗಿತ್ತು. ಭಾರತದ ಕೆ.ಎಲ್.ರಾಹುಲ್ ಕೂಡ ಸ್ಕಾಟ್ಲೆಂಡ್ ಎದುರು ಇಷ್ಟೇ ಎಸೆತಗಳಲ್ಲಿ ಅರ್ಧಶತಕ ಹೊಡೆದಿದ್ದರು.

‘ಯಾವಾಗಲೂ ಫಿಟ್ ಆಗಿರಬೇಕೆಂದರೆ ಪ್ರತಿದಿನ ದೇಹವನ್ನು ದಂಡಿಸಬೇಕಾಗುತ್ತದೆ. ಅದನ್ನೇ ನಾನು ಮಾಡುತ್ತಿದ್ದೇನೆ. ಇನ್ನೂ ಎಷ್ಟು ವರ್ಷ ಆಡುತ್ತೇನೆಯೊ ಗೊತ್ತಿಲ್ಲ, ಈಗ ವೃತ್ತಿಜೀವನದ ಪ್ರಮುಖ ಘಟ್ಟದಲ್ಲಿದ್ದು ಅದರ ಬಗ್ಗೆ ಚಿಂತಿಸುವುದೂ ಇಲ್ಲ‘ ಎಂದು ಮಲಿಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.