ಬ್ರಿಜ್ಟೌನ್: ವೇಗಿ ಕ್ರಿಸ್ ಜೋರ್ಡನ್ ಅವರ ಹ್ಯಾಟ್ರಿಕ್ ಮತ್ತು ಜೋಸ್ ಬಟ್ಲರ್ ಅಬ್ಬರದ ಬ್ಯಾಟಿಂಗ್ ಬಲ
ದಿಂದ ಇಂಗ್ಲೆಂಡ್ ತಂಡವು ಅಮೆರಿಕ ವಿರುದ್ಧ ಸುಲಭ ಜಯ ಸಾಧಿಸಿತು.

ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣ ದಲ್ಲಿ ಭಾನುವಾರ ನಡೆದ ಸೂಪರ್ 8ರ ಹಂತದ ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್ಗಳಿಂದ ಜಯಿಸಿತು. ಇದರೊಂದಿಗೆ ಸೂಪರ್ ಎಂಟರ ಹಂತದಲ್ಲಿ ಒಟ್ಟು ನಾಲ್ಕು ಅಂಕ ಗಳಿಸಿ, ಸೆಮಿಫೈನಲ್ಗೆ ಅರ್ಹತೆ ಪಡೆಯಿತು.

ಟಾಸ್ ಗೆದ್ದ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಮೆರಿಕ ತಂಡವು 18.5 ಓವರ್ಗಳಲ್ಲಿ 115 ರನ್ ಗಳಿಸಿತು. ಅದಕ್ಕುತ್ತರವಾಗಿ ಇಂಗ್ಲೆಂಡ್ ತಂಡವು 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 117 ರನ್ ಗಳಿಸಿ ಜಯಿಸಿತು.
ಫಿಲಿಪ್ ಸಾಲ್ಟ್ (ಔಟಾಗದೆ 25, 21ಎ, 4X2) ಮತ್ತು ಜೋಸ್ ಬಟ್ಲರ್ (ಔಟಾಗದೆ 83; 38ಎ, 4X6, 6X7) ಅಬ್ಬರಿಸಿದರು.

ಕ್ರಿಸ್ ಹ್ಯಾಟ್ರಿಕ್: ಅಮೆರಿಕದ ಇನಿಂಗ್ಸ್ನ 19ನೇ ಓವರ್ನಲ್ಲಿ ಕ್ರಿಸ್ ಜೋರ್ಡನ್ ಅವರು ಒಟ್ಟು ನಾಲ್ಕು ವಿಕೆಟ್ ಗಳಿಸಿದರು. ಮೊದಲ ಎಸೆತದಲ್ಲಿ ಕೋರಿ ಆ್ಯಂಡರ್ಸನ್ ವಿಕೆಟ್ ಪಡೆದರು. ಮೂರು, ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ಅಲಿ ಖಾನ್, ನಾಸ್ತುಷ್ ಕೆಂಜಿಗೆ ಹಾಗೂ ಸೌರಭ್ ನೇತ್ರಾವಳ್ಕರ್ ವಿಕೆಟ್ಗಳನ್ನು ಗಳಿಸಿ ಹ್ಯಾಟ್ರಿಕ್ ಸಾಧಿಸಿದರು. ಅಮೆರಿಕ ಇನಿಂಗ್ಸ್ನ ಆರಂಭದಲ್ಲಿ ಸಂಕಷ್ಟ ಅನು ಭವಿಸಿತು. ಆದರೆ ನಿತೀಶ್ ಕುಮಾರ್ (30 ರನ್) ಮತ್ತು ಸ್ಟೀವನ್ ಟೇಲರ್ (12 ರನ್) ಅವರಿಬ್ಬರೂ ವೇಗವಾಗಿ ರನ್ ಗಳಿಸಿ ಚೇತರಿಕೆ ನೀಡಿದರು. ಅವರು ಎರಡನೇ ವಿಕೆಟ್ ಜೊತೆಯಾಟ ದಲ್ಲಿ 36 ರನ್ ಸೇರಿಸಿದರು. ಆದರೆ ಪವರ್ಪ್ಲೇ ಮುಗಿಯುವ ಮುನ್ನವೇ ಟೇಲರ್ ವಿಕೆಟ್ ಗಳಿಸಿದ ಸ್ಯಾಮ್ ಕರನ್ ಜೊತೆಯಾಟ ಮುರಿದರು. ಆದಿಲ್ ರಶೀದ್ ಅವರು ನಿತೀಶ್ ಮತ್ತು ಆ್ಯರನ್ ಜೋನ್ಸ್ ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಅಮೆರಿಕ: 18.5 ಓವರ್ಗಳಲ್ಲಿ 115 (ನಿತೀಶ್ ಕುಮಾರ್ 30, ಕೋರಿ ಆ್ಯಂಡರ್ಸನ್ 29, ಹರ್ಮೀತ್ ಸಿಂಗ್ 21, ಸ್ಯಾಮ್ ಕರನ್ 23ಕ್ಕೆ2, ಆದಿಲ್ ರಶೀದ್ 13ಕ್ಕೆ2, ಕ್ರಿಸ್ ಜೋರ್ಡನ್ 10ಕ್ಕೆ4) ಇಂಗ್ಲೆಂಡ್: 9.4 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 117 (ಫಿಲಿಪ್ ಸಾಲ್ಟ್ ಔಟಾಗದೆ 25, ಜೋಸ್ ಬಟ್ಲರ್ ಔಟಾಗದೆ 83) ಫಲಿತಾಂಶ: ಇಂಗ್ಲೆಂಡ್ ತಂಡಕ್ಕೆ 10 ವಿಕೆಟ್ ಜಯ. ಪಂದ್ಯದ ಆಟಗಾರ: ಆದಿಲ್ ರಶೀದ್
.ಮಹಿಳಾ ಕ್ರಿಕೆಟ್ | ದಾಖಲೆ ಬರೆದ ಮಂದಾನ; ಆಫ್ರಿಕಾ ಎದುರು ಭಾರತಕ್ಕೆ 3–0 ಅಂತರದ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.