ಮುಂಬೈ: 'ನಾನೇನಾದರೂ ಭಾರತದ ಚಿಂತಕರ ಚಾವಡಿಯಲ್ಲಿ ಇದ್ದಿದ್ದರೆ ಕಾಶ್ಮೀರದ ವೇಗಿ ಉಮ್ರಾನ್ ಮಲಿಕ್ಅವರನ್ನು ನನ್ನ ಸಾರ್ವಕಾಲಿಕ ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ' ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಾಸಿಂಗ್ ಅಕ್ರಂ ಹೇಳಿದ್ದಾರೆ.

ಖಲೀಜ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ಅಕ್ರಂ ಅವರುಭಾರತ ಕ್ರಿಕೆಟ್ ತಂಡದ ಬೌಲಿಂಗ್ ವಿಭಾಗದ ಬಗ್ಗೆಮಾತನಾಡಿದ್ದಾರೆ.

ಈ ಬಾರಿಯವಿಶ್ವಕಪ್ ಟೂರ್ನಿಯು ಇದೇ (ಅಕ್ಟೋಬರ್) 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ.ಪ್ರಮುಖ ವೇಗಿಗಳಾದ ಜಸ್ಪ್ರೀತ್ ಬೂಮ್ರಾ ಹಾಗೂ ದೀಪಕ್ ಚಾಹರ್ ಅವರು ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿದ್ದಾರೆ. ಹೀಗಾಗಿ ಅನುಭವಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಮತ್ತು ಯುವ ಬೌಲರ್ ಅರ್ಶದೀಪ್ ಸಿಂಗ್ ಭಾರತದ ಭರವಸೆಯಾಗಿದ್ದಾರೆ.

ಭುವನೇಶ್ವರ್ ಅವರು ಆಸ್ಟ್ರೇಲಿಯಾ ಪಿಚ್ಗಳಲ್ಲಿ ಪ್ರಯಾಸಪಡಬಹುದು ಎಂದು ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

'ಭಾರತ ಪರ ಭುವನೇಶ್ವರ್ ಕುಮಾರ್ ಇದ್ದಾರೆ. ಅವರು ಹೊಸ ಚೆಂಡಿನೊಂದಿಗೆ ಉತ್ತಮವಾಗಿ ಬೌಲಿಂಗ್ ಮಾಡಬಲ್ಲರು. ಆದರೆ, ಅವರು ಎಸೆಯುವ ವೇಗದಲ್ಲಿ ಚೆಂಡು ಸ್ವಿಂಗ್ ಆಗದಿದ್ದರೆ, ಬಹುಶಃ ಪ್ರಯಾಸ ಪಡುತ್ತಾರೆ.ಭುವಿ ಉತ್ತಮ ಬೌಲರ್ ಎಂಬುದರಲ್ಲಿ ಅನುಮಾನವಿಲ್ಲ. ಎರಡೂ ದಿಕ್ಕಿಗೆ ಸ್ವಿಂಗ್ ಮಾಡಬಲ್ಲರು. ಉತ್ತಮ ಯಾರ್ಕರ್ಗಳನ್ನೂ ಹೊಂದಿದ್ದಾರೆ. ಆದರೆ, ಆಸ್ಟ್ರೇಲಿಯಾದಲ್ಲಿ ವೇಗ ಬೇಕಾಗುತ್ತದೆ' ಎಂದು ಪ್ರತಿಪಾದಿಸಿದ್ದಾರೆ.

ಭಾರತತಂಡದಲ್ಲಿ ಉಮ್ರಾನ್ಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿರುವ ಅಕ್ರಂ,'ನೀವು ಕಾಶ್ಮೀರದ ಉಮ್ರಾನ್ ಮಲಿಕ್ ಅವರನ್ನು ನೋಡುತ್ತಿದ್ದೀರಿ.ಭಾರತ ತಂಡಕ್ಕೆಅವರನ್ನು ಆಯ್ಕೆ ಮಾಡಬೇಕಾಗುತ್ತದೆ. ಏಕೆಂದರೆ,ಉಮ್ರಾನ್ವೇಗವಾಗಿ ಬೌಲಿಂಗ್ ಮಾಡಬಲ್ಲರು.ನಾನೇನಾದರೂ ಭಾರತದ ಚಿಂತಕರ ಚಾವಡಿಯಲ್ಲಿ ಇದ್ದರೆ ಅವರನ್ನು ನನ್ನ ಸಾರ್ವಕಾಲಿಕ ತಂಡಕ್ಕೆ ಆಯ್ಕೆ ಮಾಡುತ್ತಿದ್ದೆ' ಎಂದೂ ಹೇಳಿದ್ದಾರೆ.

ಭಾರತ ವಿಶ್ವಕಪ್ ಗೆಲ್ಲಲು ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪಾತ್ರ ಮುಖ್ಯವಾದದ್ದು ಎಂದೂ ಅಕ್ರಂಇದೇ ವೇಳೆ ಹೇಳಿದ್ದಾರೆ.

'ಸೂರ್ಯಕುಮಾರ್ ಅಪಾಯಕಾರಿ ಬ್ಯಾಟರ್. ಮೈದಾನದ ಎಲ್ಲ ಕಡೆ (360) ರನ್ ಗಳಿಸಬಲ್ಲರು. ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡದಲ್ಲಿ ಅವರನ್ನು ಮೊದಲು ನೋಡಿದ್ದೆ. ಎರಡು ವರ್ಷ ಜೊತೆಗೆ ಇದ್ದೆ. ತದನಂತರಕೆಕೆಆರ್ ಅವರನ್ನು ಬಿಡ್ಡಿಂಗ್ ವೇಳೆ ಬಿಟ್ಟುಕೊಟ್ಟದ್ದು ಅಚ್ಚರಿ ಮೂಡಿಸಿತ್ತು. ಆಗಸೂರ್ಯಕುಮಾರ್ಗೆ 19 ಅಥವಾ 20 ವರ್ಷ ಇರಬಹುದು. ಈಗ ಅವರೇ ಕೆಕೆಆರ್ಗೆ ನಾಯಕರಾಗಿರಬಹುದಿತ್ತು' ಎಂದು ಹೇಳಿಕೊಂಡಿದ್ದಾರೆ.

'ಟಿ20 ಮಾದರಿಗೆ ಸೂರ್ಯಕುಮಾರ್ ಭವಿಷ್ಯದ ಆಟಗಾರ ಎಂಬುದು ನನ್ನ ಭಾವನೆ. ಅವರ ಆಟನೋಡುವುದೇರಸದೌತಣ.ಅವರು ಈ ಮಾದರಿಯ ಕ್ರಿಕೆಟ್ನಲ್ಲಿ ನಿಸ್ಸಂದೇಹವಾಗಿ ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು' ಎಂದು ಮೆಚ್ಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.