ನವದೆಹಲಿ: ಟಿ20 ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತ ತಂಡವು ಟೀಕಾಕಾರರ ಬಾಯಿ ಮುಚ್ಚಿಸಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.

ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವದಲ್ಲಿ, ಈ ತಂಡವು ಗಮನಾರ್ಹ ಪ್ರದರ್ಶನ ತೋರಿಸಿದೆ. ಐಸಿಸಿ ಟಿ–20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯನ್ನು ಅಜೇಯವಾಗಿ ಗೆದ್ದ ಮೊದಲ ತಂಡವಾಗಿದೆ. ತಂಡದ ಈ ಅಭಿಯಾನವು ಪ್ರೇರಣಾದಾಯಕವಾಗಿತ್ತು’ ಎಂದು ಶಾ ತಿಳಿಸಿದ್ದಾರೆ.
.ಆಳ–ಅಗಲ: ಟಿ20 ವಿಶ್ವಕಪ್ ಅಂಗಳದ ಪ್ರೇರಣೆಯ ಕತೆಗಳು!.
‘ತಮ್ಮ ಅದ್ಭುತ ಪ್ರದರ್ಶನದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ತಮ್ಮ ಸಮರ್ಪಣೆ, ಕಠಿಣ ಪರಿಶ್ರಮದಿಂದ ನಮಗೆ ಹೆಮ್ಮೆ ಉಂಟು ಮಾಡಿದ್ದಾರೆ. ರೋಹಿತ್ ಶರ್ಮಾ ಅವರ ನಾಯಕತ್ವ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಇತರರ ನೆರವಿನಿಂದ ಅವರು 140 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸಿದ್ದಾರೆ’ ಎಂದು ಹೇಳಿದ್ದಾರೆ.

ಟಿ–20 ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ 17 ವರ್ಷಗಳ ಬಳಿಕ ಚುಟುಕು ಕ್ರಿಕೆಟ್‌ನ ಟ್ರೋಫಿ ಗೆದ್ದಿತು.
.Cricket: ಅಂತರರಾಷ್ಟ್ರೀಯ T20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ರವೀಂದ್ರ ಜಡೇಜ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.