ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಅಭಿಮಾನಿಯೊಬ್ಬರ ಬಳಿ ಚಾಕೋಲೆಟ್ ಕೊಡುವಂತೆ ಕೇಳಿರುವ ವಿಡಿಯೊ ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಭಿಮಾನಿಗಳ ಜೊತೆ ಇರುವ ಧೋನಿ ವಿಡಿಯೊವನ್ನು ಕ್ರಿಕೆಟ್ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
.Video | ಡೋನಾಲ್ಡ್ ಟ್ರಂಪ್ ಜೊತೆ ಗಾಲ್ಫ್ ಆಡಿದ ಧೋನಿ.
ಧೋನಿ, ಅಮೆರಿಕದಲ್ಲಿರುವ ಅವರ ಅಭಿಮಾನಿಗಳಿಗೆ ಆಟೋಗ್ರಾಫ್ ಹಾಗೂ ಸೆಲ್ಫಿ ನೀಡಿದ್ದಾರೆ. ‘ಈ ವೇಳೆ ಆಟೋಗ್ರಾಫ್‌ಗೆ ಬದಲಾಗಿ ನನಗೆ ಚಾಕೋಲೆಟ್ ಕೊಡಿ ‘ ಎಂದು ಕೇಳಿರುವುದು ವಿಡಿಯೊದಲ್ಲಿದೆ.

ಧೋನಿ ಅವರ ವಿನಮ್ರತೆ ಹಾಗೂ ಸರಳತೆಯ ನಡೆಗೆ ಮತ್ತೊಮ್ಮೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಧೋನಿ ಅವರು ಗಾಲ್ಫ್ ಆಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು. ಸ್ವತಃ ಟ್ರಂಪ್ ಅವರೇ ಧೋನಿಗೆ ಗಾಲ್ಫ್ ಆಟಕ್ಕೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.
.ಎಲ್ಜಿಎಮ್ ಆಡಿಯೊ ಬಿಡುಗಡೆ | ಕೇಕ್ ತಿನ್ನಿಸುವ ವೇಳೆ ನಟ ಯೋಗಿ ಬಾಬು ಕಿಚಾಯಿಸಿದ ಧೋನಿ.
ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2014ರಲ್ಲಿ ಟೆಸ್ಟ್ ಕ್ರಿಕೆಟ್ ಹಾಗೂ 2020ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಘೋಷಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.