ವಿರಾಟ್ ಕೊಹ್ಲಿ 'ಸಾರ್ವಕಾಲಿಕ ಶ್ರೇಷ್ಠ' (ಗ್ರೇಟ್ ಆಫ್ ಆಲ್ ಟೈಮ್–GOAT) ಕ್ರಿಕೆಟಿಗ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಬಳಿಕವಂತೂ ಆ ಚರ್ಚೆಗೆ ಮತ್ತಷ್ಟು ಬಲ ಬಂದಿದೆ.

ಪಾಕ್ ವಿರುದ್ಧದ ಕೊಹ್ಲಿ ಬ್ಯಾಟಿಂಗ್ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದುಚುಟುಕು ಕ್ರಿಕೆಟ್‌ನ ಶ್ರೇಷ್ಠ ಇನಿಂಗ್ಸ್ ಎಂದು ಖ್ಯಾತ ಕ್ರಿಕೆಟಿಗರೂ ಬಣ್ಣಿಸಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯ 'ಸೂಪರ್ 12'ರ ಹಂತದ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಅಕ್ಟೋಬರ್ 23 ರಂದುಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತ್ತು.

ಇದನ್ನೂ ಓದಿ:T20 World Cup | ಪಾಕ್ ವಿರುದ್ದ ರೋಚಕ ವಿಜಯದ ರೂವಾರಿ ವಿರಾಟ್

ಸವಾಲಿನ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ.ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ(4) ಹಾಗೂ ಉಪನಾಯಕ ಕೆ.ಎಲ್.ರಾಹುಲ್ (4) ತಂಡದ ಮೊತ್ತ 10 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡಿದ್ದರು.ಬಳಿಕ ಬಂದ ಸೂರ್ಯಕುಮಾರ್ ಯಾದವ್ (15) ಮತ್ತು ಅಕ್ಷರ್ ಪಟೇಲ್ (2) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೀಗಾಗಿ ಕೇವಲ 31 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ (40) ಜೊತೆಗೂಡಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ರಕ್ಷಣಾತ್ಮಕವಾಗಿ ಅಡುತ್ತಲೇ ರನ್ ಗತಿ ಹೆಚ್ಚಿಸಿದ್ದರು. ಕೊನೆಯವರೆಗೂ ಹೋರಾಡಿ ಗೆಲುವು ತಂದುಕೊಟ್ಟರು.

ಕೇವಲ53 ಎಸೆತಗಳನ್ನು ಎದುರಿಸಿದ ಕೊಹ್ಲಿ, 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್ ಬಾರಿಸಿ ಮಿಂಚಿದ್ದರು. ಅಂದಹಾಗೆ, ಮೊದಲ 50 ರನ್ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡಿದ್ದ ಅವರು, ನಂತರ 32 ರನ್ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದ್ದರು.

ಕೊಹ್ಲಿ ಆಟದಬಲದಿಂದಾಗಿ ಭಾರತಕ್ಕೆ 4 ವಿಕೆಟ್ ಅಂತರದ ಜಯ ಒಲಿಯಿತು.

ಇದನ್ನೂ ಓದಿ:ಭಾರತದ ಟಿ20 ಇತಿಹಾಸದಲ್ಲೇ ಅತ್ಯಂತ ಶ್ರೇಷ್ಠ ಇನಿಂಗ್ಸ್: ರೋಹಿತ್ ಮೆಚ್ಚುಗೆ

ನಾನುಸಾರ್ವಕಾಲಿಕ ಶ್ರೇಷ್ಠ ಅಲ್ಲ: ವಿರಾಟ್
ವಿರಾಟ್ ಕೊಹ್ಲಿ 'ಸಾರ್ವಕಾಲಿಕ ಶ್ರೇಷ್ಠ' ಆಟಗಾರರಲ್ಲಿ ಒಬ್ಬರು ಎಂದು ಕೆಲವು ಹಿರಿಯ ಕ್ರಿಕೆಟಿಗರು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಈ ಚರ್ಚೆ ನಿರಂತರವಾಗಿದೆ. ಆದರೆ, ಆ ಮಾತನ್ನು ಒಪ್ಪಲು ಸ್ವತಃ ಕೊಹ್ಲಿ ನಿರಾಕರಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ ಕೊಹ್ಲಿ, ಕ್ರಿಕೆಟ್‌ನ ಇತಿಹಾಸದಲ್ಲಿ ಇಬ್ಬರು ಮಾತ್ರವೇ 'ಸಾರ್ವಕಾಲಿಕ ಶ್ರೇಷ್ಠ' ಎನಿಸಿಕೊಳ್ಳುವ ಸಾಧನೆ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಂದಹಾಗೆ ಕೊಹ್ಲಿ, ಹೆಸರಿಸಿರುವುದು ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮತ್ತು ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ವಿವಿಯನ್ ರಿಚರ್ಡ್ಸ್ ಅವರನ್ನು.

ತಮ್ಮ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಕುರಿತುಕ್ರೀಡಾವಾಹಿನಿ 'ಸ್ಟಾರ್‌ಸ್ಪೋರ್ಟ್ಸ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಕೊಹ್ಲಿ, 'ಇಲ್ಲ. ನನ್ನನ್ನು ನಾನು ಕ್ರಿಕೆಟ್‌ನ 'ಸಾರ್ವಕಾಲಿಕ ಶ್ರೇಷ್ಠ' ಎಂದು ಪರಿಗಣಿಸುವುದಿಲ್ಲ. ನನ್ನ ಪ್ರಕಾರ ಇಬ್ಬರು ಮಾತ್ರವೇ ಹಾಗೆ ಕರೆಸಿಕೊಳ್ಳುವ ಅರ್ಹತೆ ಹೊಂದಿದ್ದಾರೆ. ಅವರು ಸಚಿನ್ ತೆಂಡೂಲ್ಕರ್ ಮತ್ತು ವಿವಿಯನ್ ರಿಚರ್ಡ್ಸ್' ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹಾಗೆ ಸಿಕ್ಸರ್ ಹೊಡೆಯಲು ವಿರಾಟ್ ಕೊಹ್ಲಿಯಿಂದ ಮಾತ್ರ ಸಾಧ್ಯ: ಹಾರ್ದಿಕ್ ಪಾಂಡ್ಯ

2008ರಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ ವಿರಾಟ್, 2012ರ ವರೆಗೆ ಸಚಿನ್ ಜೊತೆ ಆಡಿದ್ದಾರೆ. ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ತಂಡದಲ್ಲಿಯೂ ಇಬ್ಬರು ಒಟ್ಟಾಗಿ ಆಡಿದ್ದರು.

ರಿಚರ್ಡ್ಸ್, ಸಚಿನ್, ವಿರಾಟ್ ಸಾಧನೆ
ರಿಚರ್ಡ್ಸ್ ವೆಸ್ಟ್ ಇಂಡೀಸ್ ತಂಡದ ಪರ 121 ಟೆಸ್ಟ್ ಪಂದ್ಯಗಳ 182 ಇನಿಂಗ್ಸ್‌ಗಳಲ್ಲಿ ಮತ್ತು 187 ಏಕದಿನ ಪಂದ್ಯಗಳ 167 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಎರಡೂ ಮಾದರಿಯಲ್ಲಿ ಅವರುಕ್ರಮವಾಗಿ50.24ರ ಸರಾಸರಿಯಲ್ಲಿ 8,540 ರನ್ ಮತ್ತು47ರ ಸರಾಸರಿಯಲ್ಲಿ 6,721 ರನ್ ಕಲೆಹಾಕಿದ್ದಾರೆ. ಒಟ್ಟು 33 ಶತಕಗಳು ಅವರ ಬ್ಯಾಟ್‌ನಿಂದ ಬಂದಿವೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬರೋಬ್ಬರಿ 100 ಶತಕ ಸಿಡಿಸಿದ ಏಕೈಕ ಕ್ರಿಕೆಟಿಗ ಎನಿಸಿರುವ ಸಚಿನ್, ಭಾರತ ಪರ 200 ಟೆಸ್ಟ್ ಪಂದ್ಯಗಳ 329 ಇನಿಂಗ್ಸ್‌ಗಳಲ್ಲಿ ಮತ್ತು 463 ಏಕದಿನ ಪಂದ್ಯಗಳ 452 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 53.79ರ ಸರಾಸರಿಯಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ 44.83ರ ಸರಾಸರಿಯಲ್ಲಿ 18,426 ರನ್ ಕಲೆಹಾಕಿದ್ದಾರೆ. ಆಡಿರುವ ಒಂದೇ ಒಂದು ಟಿ20 ಪಂದ್ಯದಲ್ಲಿ 10 ರನ್ ಗಳಿಸಿ ಔಟಾಗಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಟಿ20ಯಿಂದ ನಿವೃತ್ತರಾಗಲಿ ಎಂದು ಶೋಯಬ್ ಅಕ್ತರ್ ಬಯಸುತ್ತಿರುವುದೇಕೆ?

ಸದ್ಯ ಆಡುತ್ತಿರುವ ಕ್ರಿಕೆಟಿಗರ ಪೈಕಿ ಅತಿಹೆಚ್ಚು ಶತಕ, ಅತಿಹೆಚ್ಚು ರನ್ ಗಳಿಸಿರುವ ಆಟಗಾರ ಎಂಬ ಖ್ಯಾತಿ ವಿರಾಟ್ ಕೊಹ್ಲಿಯದ್ದು. ಅವರು ಈ ವರೆಗೆ 102 ಟೆಸ್ಟ್ ಪಂದ್ಯಗಳ173 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದು,49.53ರ ಸರಾಸರಿಯಲ್ಲಿ8,074 ರನ್ ಕಲೆಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 262 ಪಂದ್ಯಗಳ 253 ಇನಿಂಗ್ಸ್‌ಗಳಿಂದ57.68ರ ಸರಾಸರಿಯಲ್ಲಿ12,344 ರನ್ ಗಳಿಸಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಕಲೆಹಾಕಿದ ಆಟಗಾರ ಎನಿಸಿರುವ ಕೊಹ್ಲಿ, 111 ಪಂದ್ಯಗಳ 103 ಇನಿಂಗ್ಸ್‌ಗಳಿಂದ3,856 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ52.82. ಮೂರೂ ಮಾದರಿಯಿಂದ ಒಟ್ಟು 71 ಶತಕ ಸಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.