ಬೆಂಗಳೂರು: ಪ್ರಸಕ್ತ ಐಪಿಎಲ್‌ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿರುವ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಟಿ–20 ವಿಶ್ವಕಪ್‌ನಲ್ಲಿ ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿಸಬೇಕು ಎಂದು ಭಾರತ ತಂಡ ಮಾಜಿ ಆಟಗಾರ ಸೌರವ್ ಗಂಗೂಲಿ, ತಂಡದ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ.
.IPL 2024 | ವಿರಾಟ್ ದಾಖಲೆಯ ಶತಕಕ್ಕೆ ಒಲಿಯದ ಗೆಲುವು: RCBಗೆ ಸತತ ಮೂರನೇ ಸೋಲು .
‘ವಿರಾಟ್ ಅವರು ಅತ್ಯುತ್ತಮವಾಗಿ ಆಟವಾಡುತ್ತಿದ್ದಾರೆ. ಕಳೆದ ಪಂದ್ಯದಲ್ಲಿ ವೇಗವಾಗಿ 90ರನ್ ಗಳಿಸಿದರು. ಟಿ–20 ವಿಶ್ವಕಪ್‌ನಲ್ಲಿ ಅವರನ್ನು ಓಪನಿಂಗ್ ಬ್ಯಾಟರ್ ಆಗಿ ಕಣಕ್ಕಿಳಿಸಬೇಕು. ಅವರ ಕೆಲವು ಐಪಿಎಲ್ ಇನಿಂಗ್ಸ್‌ಗಳು ಅದ್ಭುತವಾಗಿದ್ದವು’ ಎಂದು ಗಂಗೂಲಿ ಹೇಳಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ 12 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 70.44ರ ಸರಾಸರಿಯಲ್ಲಿ 634 ರನ್ ಗಳಿಸಿದ್ದಾರೆ. 153.51ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ.
.ವಿರಾಟ್ ಕೊಹ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ಸಲ್ಮಾನ್ ಖಾನ್.
ವಿಶ್ವಕಪ್‌ಗೆ ಆಯ್ಕೆ ಮಾಡಿರುವ ತಂಡದ ಬಗ್ಗೆಯೂ ಪ್ರಶಂಸೆ ವ್ಯಕ್ತಪಡಿಸಿರುವ ಅವರು, 17 ವರ್ಷದ ಬಳಿಕ ಭಾರತ ಟ್ರೋಫಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಉತ್ತಮ ತಂಡವನ್ನೇ ಆಯ್ಕೆ ಮಾಡಲಾಗಿದೆ. ಬ್ಯಾಟಿಂಗ್, ಬೌಲಿಂಗ್ ವಿಭಾಗವೂ ಗಟ್ಟಿಯಾಗಿದೆ. ಸದ್ಯ ವಿಶ್ವದಲ್ಲೇ ಬೂಮ್ರಾ ಉತ್ಯುತ್ತಮ ಬೌಲರ್. ಅನುಭವಿ ಕುಲದೀಪ್, ಅಕ್ಷರ್, ಸಿರಾಜ್ ಇದ್ದಾರೆ. ಇದೊಂದು ಉತ್ತಮ ಸಂಯೋಜಿತ ತಂಡ’ ಎಂದು ಗಂಗೂಲಿ ಹೇಳಿದ್ದಾರೆ.
.ಅಂಪೈರ್ ನಿರ್ಧಾರಕ್ಕೆ ಅಸಮ್ಮತಿ: ವಿರಾಟ್ ಕೊಹ್ಲಿಗೆ ದಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.