ಮುಂಬೈ: ವಿರಾಟ್ ಕೊಹ್ಲಿ ಅವರು ಅಪಾರ ಒತ್ತಡದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಉಳಿದ ಬ್ಯಾಟರ್‌ಗಳೂ ಚೆನ್ನಾಗಿ ಆಡುವ ಮೂಲಕ ಕೊಹ್ಲಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಪ್ರಸಕ್ತ ಟೂರ್ನಿಯಲ್ಲಿ ಕೊಹ್ಲಿ 203 ರನ್‌ಗಳನ್ನು ಗಳಿಸಿದ್ದಾರೆ. ಆದರೆ ಉಳಿದ ಬ್ಯಾಟರ್‌ಗಳು ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ.

ಈ ಕುರಿತು ಸ್ಮಿತ್ ಸ್ಟಾರ್ ಸ್ಪೋರ್ಟ್ಸ್ ಸಂವಾದದಲ್ಲಿ ಮಾತನಾಡಿದರು.

‘ತಂಡದ ಉಳಿದ ಪ್ರಮುಖ ಬ್ಯಾಟರ್‌ಗಳು ತಮ್ಮ ಹೊಣೆ ನಿಭಾಯಿಸಬೇಕು. ತಂಡದ ಗೆಲುವಿಗಾಗಿ ವಿರಾಟ್ ಅವರೊಬ್ಬರ ಮೇಲೆ ಅವಲಂಬಿತವಾಗುವುದು ಸರಿಯಲ್ಲ. ಇದರಿಂದಾಗಿ ಅವರ ಮೇಲೆ ಹೆಚ್ಚುವರಿ ಒತ್ತಡ ಬಿದ್ದಿದೆ. ಅಗ್ರ ಮತ್ತು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಉತ್ತಮವಾಗಿ ಆಡಬೇಕು’ ಎಂದು ಹೇಳಿದರು.

‘ವಿರಾಟ್ ಅತ್ಯದ್ಭುತ ಆಟಗಾರ. ಆದರೆ ಪ್ರತಿ ಪಂದ್ಯದಲ್ಲಿಯೂ ಅವರೇ ಹೆಚ್ಚು ರನ್ ಗಳಿಸಬೇಕು ಎಂದು ನಿರೀಕ್ಷಿಸುವುದು ತಪ್ಪು. ಅವರಿಗೆ ಉಳಿದವರಿಂದ ಸೂಕ್ತ ಬೆಂಬಲ ಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.