ಬೆಂಗಳೂರು: ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಪಡೆದ ಭಾರತದ ಆಟಗಾರ್ತಿ ರಾಧಾ ಯಾದವ್ ಅವರ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು.

ಟೀಂ ಇಂಡಿಯಾದ ಪ್ರಿಯಾ ಮಿಶ್ರಾ ಹಾಕಿದ 31 ಓವರ್ನ 2ನೇ ಎಸೆತವನ್ನು ನ್ಯೂಜಿಲೆಂಡ್ನ ಬ್ರೂಕ್ ಹಲ್ಲಿಡೇ ಅವರು ಎಕ್ಸ್ಟ್ರಾ ಕವರ್ನತ್ತ ಬಾರಿಸಿದರು. ಮೇಲಕ್ಕೆ ಹಾರಿದ ಚೆಂಡಿಗಾಗಿ ಹಿಮ್ಮುಖವಾಗಿ ಓಡಿದ ರಾಧಾ ಯಾದವ್, ಜಿಗಿದು ಹಿಡಿತಕ್ಕೆ ಪಡೆದರು. ಅವರು ಗಾಳಿಯಲ್ಲಿದ್ದಾಗಲೇ, ಚೆಂಡನ್ನು ಹಿಡಿದ ರೀತಿ ಅಮೋಘವಾಗಿತ್ತು.

ಭಾರತದ ಪದಾರ್ಪಣೆ ಪಂದ್ಯವಾಡಿದ ಮಿಶ್ರಾ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದು ಚೊಚ್ಚಲ ವಿಕೆಟ್ ಎಂಬುದು ವಿಶೇಷ.

ಆ ಸಂದರ್ಭದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕ್ರಿಕೆಟ್ ಪ್ರಿಯರು, ರಾಧಾ ಅವರ ಕ್ಷೇತ್ರರಕ್ಷಣೆ, ಕೌಶಲ, ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವರು, 'ಭಾರತದ ಅತ್ಯುತ್ತಮ ಫೀಲ್ಡರ್ ರಾಧಾ ಯಾದವ್' ಎಂದು ಕೊಂಡಾಡಿದ್ದಾರೆ.

ಸರಣಿ ಸಮಬಲ

ರಾಧಾ ಅವರ ಆಲ್ರೌಂಡ್ ಪ್ರದರ್ಶನದ ಹೊರತಾಗಿಯೂ ಭಾರತ ಈ ಪಂದ್ಯದಲ್ಲಿ ಸೋಲು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ನಾಯಕಿ ಸೋಫಿ ಡಿವೈನ್ (79 ರನ್) ಹಾಗೂ ಅನುಭವಿ ಸೂಝಿ ಬೆಟ್ಸ್ (58 ರನ್) ಗಳಿಸಿದ ಅರ್ಧಶತಕಗಳ ಬಲದಿಂದ ನಿಗದಿತ 50 ಓವರ್ಗಳಲ್ಲಿ 259 ರನ್ ಗಳಿಸಿತ್ತು.

ಈ ಗುರಿ ಬೆನ್ನತ್ತಿದ ಹರ್ಮನ್ಪ್ರೀತ್ ಕೌರ್ ಪಡೆ ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿತು. ಕೆಳ ಕ್ರಮಾಂಕದ ಬ್ಯಾಟರ್ಗಳಾದ ರಾಧಾ ಹಾಗೂ ಸೈಮಾ ಠಾಕೂರ್ ಹೊರತುಪಡಿಸಿ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ, ಕೇವಲ 183 ರನ್ಗಳಿಗೆ ಸರ್ವಪತನ ಕಂಡು 76 ರನ್ ಅಂತರದ ಸೋಲು ಒಪ್ಪಿಕೊಳ್ಳಬೇಕಾಯಿತು.

ಬೌಲಿಂಗ್ನಲ್ಲಿ ಮಿಂಚಿ 4 ವಿಕೆಟ್ ಪಡೆದಿದ್ದ ರಾಧಾ, ಬ್ಯಾಟಿಂಗ್ನಲ್ಲಿಯೂ 48 ರನ್ಗಳ ಕಾಣಿಕೆ ನೀಡಿದರು. ಸೈಮಾ ಅವರು 29 ರನ್ ಗಳಿಸಿದರು. ಇವರಿಬ್ಬರು ಉಪಯುಕ್ತ ಆಟವಾಡದಿದ್ದರೆ, ತಂಡದ ಮೊತ್ತ 150ರ ಗಡಿ ದಾಟುವುದೇ ಕಷ್ಟವಾಗುತ್ತಿತ್ತು.
.ಮಹಿಳಾ ಕ್ರಿಕೆಟ್ | ಭಾರತದ ಎದುರು ನ್ಯೂಜಿಲೆಂಡ್ಗೆ ಜಯ; ಸರಣಿ ಸಮಬಲ.

ನಾಳೆ 'ಫೈನಲ್'

ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1–1 ಅಂತರದ ಸಮಬಲ ಸಾಧಿಸಿವೆ. ಇದೇ ಮೈದಾನದಲ್ಲಿ ಅಕ್ಟೋಬರ್ 24ರಂದು ನಡೆದ ಪಂದ್ಯವನ್ನು ಭಾರತ ಗೆದ್ದಿತ್ತು. ಅಂತಿಮ ಪಂದ್ಯವು ನಾಳೆ ನಡೆಯಲಿದೆ. ಸರಣಿ ಗೆಲ್ಲಲು ಅದು 'ಫೈನಲ್' ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.