ನವದೆಹಲಿ: ಜಮೈಕಾಗೆ ಕೋವಿಡ್-19 ಲಸಿಕೆಯನ್ನು ಕೊಡುಗೆಯಾಗಿ ನೀಡಿರುವ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೆಸ್ಟ್ಇಂಡೀಸ್ನ ಜನಪ್ರಿಯ ಕ್ರಿಕೆಟಿಗ ಕ್ರಿಸ್ ಗೇಲ್ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.

ಕೆರೆಬಿಯನ್ ದ್ವೀಪ ರಾಷ್ಟ್ರಕ್ಕೆ ಭಾರತವು 50,000 ಕೋವಿಡ್-19 ಲಸಿಕೆ ಡೋಸ್ಗಳನ್ನು ರವಾನಿಸಿತ್ತು.

ಇದಕ್ಕೂ ಮೊದಲು ಜಮೈಕಾದ ಆ್ಯಂಡ್ರೆ ರಸೆಲ್ ಸಹ ಭಾರತವನ್ನು ಅಭಿನಂದಿಸಿದ್ದರು.

ಕ್ರಿಸ್ ಗೇಲ್ ವಿಡಿಯೊ ಸಂದೇಶವನ್ನು ಜಮೈಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹಂಚಿಕೊಂಡಿದೆ. 17 ಸೆಕೆಂಡುಗಳ ವಿಡಿಯೊದಲ್ಲಿ ಜಮೈಕಾಗೆ ಕೋವಿಡ್-19 ಲಸಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಸರ್ಕಾರ ಮತ್ತು ಭಾರತೀಯ ಜನತೆಗೆ ಕೃತಜ್ಞತೆಗಳನ್ನು ಅರ್ಪಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:ಜಮೈಕಾಗೆ ಕೋವಿಡ್-19 ಲಸಿಕೆ; ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಕ್ರಿಕೆಟಿಗ ರಸೆಲ್

ಗುರುವಾರದಂದು ಭಾರತದ ಹೈಕಮಿಷನರ್ ಆರ್. ಮಸಾಕುಯಿ ಅವರನ್ನು ಕ್ರಿಸ್ ಗೇಲ್ ಭೇಟಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.