ಅಡಿಲೇಡ್: ಮಾರ್ನಸ್ ಲಾಬುಷೇನ್ (163) ಮತ್ತು ಟ್ರ್ಯಾವಿಸ್ ಹೆಡ್ (175) ಅವರ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ, ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದೆ.

ಅಡಿಲೇಡ್ ಓವರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಶುಕ್ರವಾರ ಆತಿಥೇಯ ತಂಡ 7 ವಿಕೆಟ್ಗೆ 511 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆರಂಭಿಕ ಆಘಾತ ಅನುಭವಿಸಿರುವ ವೆಸ್ಟ್ ಇಂಡೀಸ್ ತಂಡ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗಳಿಗೆ 102 ರನ್ ಗಳಿಸಿದೆ.

ಆಸ್ಟ್ರೇಲಿಯಾ ತಂಡ 3 ವಿಕೆಟ್ಗೆ 330 ರನ್ಗಳಿಂದ ಶುಕ್ರವಾರ ಬ್ಯಾಟಿಂಗ್ ಮುಂದುವರಿಸಿತ್ತು. ಲಾಬುಷೇನ್ ಮತ್ತು ಹೆಡ್ ಅವರು ನಾಲ್ಕನೇ ವಿಕೆಟ್ಗೆ 297 ರನ್ಗಳ ಜತೆಯಾಟ ನೀಡಿದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್; ಆಸ್ಟ್ರೇಲಿಯಾ 137 ಓವರ್ಗಳಲ್ಲಿ 7 ವಿಕೆಟ್ಗೆ 511 ಡಿಕ್ಲೇರ್ಡ್ (ಮಾರ್ನಸ್ ಲಾಬುಷೇನ್ 163, ಟ್ರ್ಯಾವಿಸ್ ಹೆಡ್ 175, ಅಲೆಕ್ಸ್ ಕೇರಿ ಔಟಾಗದೆ 41, ಅಲ್ಜರಿ ಜೋಸೆಫ್ 107ಕ್ಕೆ 2, ಡೆವೊನ್ ಥಾಮಸ್ 53ಕ್ಕೆ 2) ವೆಸ್ಟ್ ಇಂಡೀಸ್: 37 ಓವರ್ಗಳಲ್ಲಿ 4 ವಿಕೆಟ್ಗೆ 102 (ಕ್ರೆಗ್ ಬ್ರಾಥ್ವೇಟ್ 19, ತೇಜ್ನಾರಾಯಣ ಚಂದ್ರಪಾಲ್ ಬ್ಯಾಟಿಂಗ್ 47, ಮೈಕಲ್ ನೇಸರ್ 20ಕ್ಕೆ 2, ನೇಥನ್ ಲಿಯೊನ್ 13ಕ್ಕೆ 1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.