ಪ್ರಾವಿಡೆನ್ಸ್(ವೆಸ್ಟ್ ಇಂಡೀಸ್): ಮಿಥಾಲಿ ರಾಜ್ ಮತ್ತು ಸ್ಮೃತಿ ಮಂದಾನ ಅವರ ಅಮೋಘ ಜೊತೆಯಾಟದ ನೆರವಿನಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 52 ರನ್‌ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 145ರನ್ ಗಳಿಸಿತು.

ಇನಿಂಗ್ಸ್ ಆರಂಭಿಸಿದ ಅನುಭವಿ ಮಿಥಾಲಿ 1 ಸಿಕ್ಸರ್, 4 ಬೌಂಡರಿ ಸಹಿತ56 ಎಸೆತಗಳಲ್ಲಿ 51ರನ್ ಗಳಿಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಮಂದಾನ ಕೇವಲ 29 ಎಸೆತಗಳಲ್ಲಿ 33 ರನ್‌ಗಳಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 60 ಎಸೆತಗಳಲ್ಲಿ 67 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು.

ಮಂದಾನ ಔಟಾದ ನಂತರ ಮಿಥಾಲಿ ಅವರ ಜೊತೆಗೂಡಿದ ಜೆಮಿಮಾ ರಾಡ್ರಿಗಸ್ 49 ರನ್‌ಗಳ ಜೊತೆಯಾಟ ಆಡಿದರು.ಹರ್ಮನ್‌ಪ್ರೀತ್ ಕೌರ್ ಮತ್ತು ವೇದಾ ಕೃಷ್ಣಮೂರ್ತಿ ಬೇಗನೇ ಔಟಾದರೂ ಮಿಥಾಲಿ ರಾಜ್ ಎದುರಾಳಿ ಬೌಲರ್‌ಗಳನ್ನು ಕಂಗೆಡಿಸಿದರು. ಅರ್ಧಶತಕ ಗಳಿಸಿ 19ನೇ ಓವರ್‌ನಲ್ಲಿ ಔಟಾದರು.

ಭಾರತದ ಸವಾಲಿನ ಗುರಿ ಎದುರು ಇನಿಂಗ್ಸ್ ಆರಂಭಿಸಿದಐರ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 93ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಬೆಳಿಗ್ಗೆ ಇಲ್ಲಿ ಜೋರಾಗಿ ಮಳೆ ಸುರಿದಿದ್ದ ಕಾರಣ ಪಂದ್ಯವನ್ನು 45 ನಿಮಿಷ ತಡವಾಗಿ ಆರಂಭವಾಯಿತು. ಅಂಕಣದಲ್ಲಿ ನಿಂತಿದ್ದ ನೀರನ್ನು ಸೂಪರ್ ಸಾಪರ್ ಮೂಲಕ ಹೊರಹಾಕಲಾಗಿತ್ತು.

ಸಂಕ್ಷಿಪ್ತ ಸ್ಕೋರ್

ಭಾರತ: 20 ಓವರ್‌ಗಳಲ್ಲಿ 6ಕ್ಕೆ 145

ಮಿಥಾಲಿ ರಾಜ್ 51, ಸ್ಮೃತಿ ಮಂದಾನ 33, ಜೆಮಿಮಾ ರಾಡ್ರಿಗಸ್ 18, ಗರ್ತ್ 22ಕ್ಕೆ2

ಐರ್ಲೆಂಡ್: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 93

ಶಿಲ್ಲಿಂಗ್ಟನ್ 23, ಜಾಯ್ಸ್ 33,ಆರ್.ಪಿ.ಯಾದವ್ 25ಕ್ಕೆ3

ಫಲಿತಾಂಶ: ಭಾರತಕ್ಕೆ 52ರನ್ ಗೆಲುವು. ಪಂದ್ಯ ಶ್ರೇಷ್ಠ: ಮಿಥಾಲಿ ರಾಜ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.