ಶಾರ್ಜಾ: ಹಾಲಿ ಚಾಂಪಿಯನ್ ಸೂಪರ್‌ನೋವಾಸ್ ತಂಡವು ಸೋಮವಾರ ಮಹಿಳೆ ಟ್ವೆಂಟಿ–20 ಚಾಲೆಂಜರ್ಸ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಜಯಿಸುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಇಲ್ಲಿಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಬಳಗವು ಸ್ಮೃತಿ ಮಂದಾನ ನಾಯಕತ್ವದ ಟ್ರೇಲ್‌ಬ್ಲೆಜರ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯ ರೌಂಡ್ ರಾಬಿನ್ ಲೀಗ್‌ನಲ್ಲಿ ಶನಿವಾರ ಈ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಕೌರ್ ಬಳಗವು ಮಿಂಚಿತ್ತು. ಸೂಪರ್ ನೋವಾ ತಂಡವು 2018 ಮತ್ತು 2019ರಲ್ಲಿ ಚಾಂಪಿಯನ್ ಆಗಿತ್ತು.

ಈ ಬಾರಿ ತಂಡದ ಆರಂಭಿಕ ಬ್ಯಾಟರ್ ಚಾಮರಿ ಅಟಪಟ್ಟು (111ರನ್) ಅಮೋಘ ಲಯದಲ್ಲಿದ್ದಾರೆ. ಇದುವರೆಗೆ ತಂಡದ ಗರಿಷ್ಠ ರನ್ ಸ್ಕೋರರ್ ಆಗಿದ್ದಾರೆ. ಹೋದ ವರ್ಷದ ಟೂರ್ನಿಯಲ್ಲಿ ಎರಡು ಅರ್ಧಶತಕ ಹೊಡೆದಿದ್ದ ಹರ್ಮನ್ ಪ್ರೀತ್ ಈ ಬಾರಿ ಇನ್ನೂ ತಮ್ಮ ನೈಜ ಆಟಕ್ಕೆ ಕುದುರಿಲ್ಲ.

ಟ್ರೇಲ್‌ಬ್ಲೆಜರ್ ತಂಡದ ಬೌಲರ್ ಇಂಗ್ಲೆಂಡ್‌ನ ಸೋಫಿ ಎಕ್ಲೆಲ್ಸೆಟನ್ ಮತ್ತು ಜೂಲನ್ ಗೋಸ್ವಾಮಿ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ವೆಲೊಸಿಟಿ ತಂಡವು ಅಲ್ಪಮೊತ್ತಕ್ಕೆ ಕುಸಿಯಲು ಕಾರಣರಾಗಿದ್ದರು. ಶನಿವಾರದ ಪಂದ್ಯಗಳಲ್ಲಿ ಇವರ ಆಟ ನಡೆಯದಂತೆ ಕೌರ್ ಬಳಗವು ನೋಡಿಕೊಂಡಿತ್ತು. ಆದರೆ, ಫೈನಲ್‌ನಲ್ಲಿ ಇವರಿಬ್ಬರು ಹಿಡಿತ ಸಾಧಿಸಿದರೆ ಸೂಪರ್‌ನೋವಾಸ್‌ಗೆ ಕಠಿಣವಾಗುವುದು ಖಚಿತ. ಆದರೆ ಪ್ರಶಸ್ತಿ ಜಯದ ಹ್ಯಾಟ್ರಿಕ್ ಸಾಧಿಸುವ ಛಲದಲ್ಲಿರುವ ಹರ್ಮನ್‌ಪ್ರೀತ್ ಬಳಗವು ದಿಟ್ಟ ಹೋರಾಟ ನಡೆಸಲು ಸಿದ್ಧವಾಗಿದೆ. ಈ ಪಂದ್ಯದಲ್ಲಿ ಸ್ಪಿನ್‌ಬೌಲರ್‌ಗಳು ಹೆಚ್ಚು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ. ಮಂದಾನ ಬಳಗದಲ್ಲಿರುವ ಕರ್ನಾಟಕದ ರಾಜೇಶ್ವರಿ ಗಾಯಕವಾಡ್ ಅವರ ಮೇಲೆ ಹೆಚ್ಚು ನಿರೀಕ್ಷೆಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.