ಮ್ಯಾಂಚೆಸ್ಟರ್:ಅಫ್ಗಾನಿಸ್ತಾನ ಎದುರು ಮಂಗಳವಾರದ ಪಂದ್ಯದಲ್ಲಿ 17 ಸಿಕ್ಸರ್ಗಳನ್ನು ಸಿಡಿಸಿರುವ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಏಕದಿನ ಪಂದ್ಯಗಳ ಇತಿಹಾಸದಲ್ಲಿ ಒಂದೇ ಇನಿಂಗ್ಸ್ನಲ್ಲಿಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಇವರದಾಗಿದೆ.

ಇದನ್ನೂ ಓದಿ: ಇಯಾನ್ ಮಾರ್ಗನ್ ಸಿಕ್ಸರ್ಗಳ ಅಬ್ಬರಕೆ ಬೆಚ್ಚಿದ ಅಫ್ಗಾನ್;ಇಂಗ್ಲೆಂಡ್ 397 ರನ್

ಒಬ್ಬ ಬ್ಯಾಟ್ಸ್ಮನ್ನಿಂದಒಂದೇ ಇನಿಂಗ್ಸ್ನಲ್ಲಿ ಹೊರಬಂದ ಅತ್ಯಧಿಕ ಸಿಕ್ಸರ್ಗಳ ದಾಖಲೆಯನ್ನು ಇಯಾನ್ ಮಾರ್ಗನ್ ಮಾಡಿದ್ದಾರೆ. ಟೀಂ ಇಂಡಿಯಾದ ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್ನ ಕ್ರಿಸ್ ಗೇಲ್ ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಒಂದೇ ಇನಿಂಗ್ಸ್ನಲ್ಲಿ 16 ಸಿಕ್ಸರ್ಗಳನ್ನು ಸ್ಫೋಟಿಸಿರುವ ದಾಖಲೆ ಹೊಂದಿದ್ದಾರೆ. 17 ಸಿಕ್ಸರ್ಗಳನ್ನು ಹೊಡೆಯುವ ಮೂಲಕ ಮಾರ್ಗನ್ ಈ ಎಲ್ಲ ಬ್ಯಾಟ್ಸ್ಮನ್ಗಳನ್ನು ಹಿಂದಿಟ್ಟಿದ್ದಾರೆ.

ಇಯಾನ್ ಮಾರ್ಗನ್ ಮತ್ತು ಜೋ ರೂಟ್ ನಡೆಸಿದ 189 ರನ್ಗಳ ಜತೆಯಾಟ ಅಫ್ಗಾನಿಸ್ತಾನದ ಬೌಲರ್ಗಳನ್ನು ಕಂಗಾಲಾಗಿಸಿತು. ಮಾರ್ಗನ್ ಹೊಡೆತಗಳನ್ನು ನಿಯಂತ್ರಿಸಲು ಪರದಾಡಿದ ಅಫ್ಗಾನ್ ಪಡೆ, ಅವರನ್ನು ಹಿಡಿದು ಎಳೆದು ರನ್ ಔಟ್ ಮಾಡುವ ಪ್ರಯತ್ನವೂ ನಡೆಯಿತು. ಸಿಕ್ಸರ್ಗಳ ಮೂಲಕವೇ ಮಾರ್ಗನ್ 102 ರನ್ ಸೇರಿಸಿದರು. 71 ಎಸೆತಗಳಲ್ಲಿ 148 ರನ್ಗಳಿಸಿ ವಿಕೆಟ್ ಒಪ್ಪಿಸಿದರು.

ತಂಡದಿಂದ ಒಂದೇ ಇನಿಂಗ್ಸ್ನಲ್ಲಿ ಒಟ್ಟು 25 ಸಿಕ್ಸರ್ಗಳು ಹೊರ ಬಂದಿರವುದೂ ಸಹ ಮತ್ತೊಂದು ದಾಖಲೆ.

ಅಫ್ಗಾನ್ ವಿರುದ್ಧ 30ನೇ ಓವರ್ನಲ್ಲಿ ಕಣಕ್ಕಿಳಿದ ಮಾರ್ಗನ್ ಆರಂಭದಿಂದಲೇ ಬಿರುಸಿನ ಹೊಡೆತಗಳಿಗೆ ಮುಂದಾದರು. ಕೇವಲ 57 ಎಸೆತಗಳಲ್ಲಿ ಶತಕ ಪೂರೈಸುವ ಮೂಲಕ ವಿಶ್ವಕಪ್ ಕ್ರಿಕೆಟ್ ಟೂರ್ನಿಗಳಲ್ಲಿ ವೇಗವಾಗಿ 100ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಕ್ಷಣಕ್ಷಣದ ಸ್ಕೋರ್:https://bit.ly/2ImDxL4

ಅತಿ ವೇಗದ ಶತಕ ಗಳಿಸಿರುವವರು: ಐರ್ಲೆಂಢ್ನ ಕೆವಿನ್ ಓಬ್ರಿನ್ (50 ಎಸೆತ), ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್(51 ಎಸೆತ) ಹಾಗೂ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್(52 ಎಸೆತ) ವೇಗವಾಗಿ 100ರನ್ ಪೂರೈಸಿರುವವರ ಪಟ್ಟಿಯಲ್ಲಿ ಮೇಲಿದ್ದಾರೆ. ಇದೀಗ ಮಾರ್ಗನ್ ನಾಲ್ಕನೇ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಮೊತ್ತವನ್ನು ದಾಖಲಿಸಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್ ನಷ್ಟಕ್ಕೆ 386 ಗಳಿಸಿತ್ತು. ಜೂನ್ 18ರ ಪಂದ್ಯದಲ್ಲಿ ಅಫ್ಗಾನಿಸ್ತಾನದ ವಿರುದ್ಧ 6 ವಿಕೆಟ್ ಕಳೆದು ಕೊಂಡು 397 ರನ್ ಗಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.