ಸೌತಾಂಪ್ಟನ್: ಐತಿಹಾಸಿಕ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಕ್ಕಿಂತ ಹೆಚ್ಚಾಗಿ ಮಳೆಯೇ ಆಟವಾಡುತ್ತಿದೆ. ಪಂದ್ಯದ ಆರಂಭಿಕ ದಿನದಿಂದಲೂ ವಿಘ್ನವನ್ನು ತಂದೊಡ್ಡುತ್ತಿರುವ ಮಳೆ ಮೊದಲ ಮತ್ತು ನಾಲ್ಕನೆಯ ದಿನ ಆಟಗಾರರನ್ನು ಮೈದಾನಕ್ಕೆ ಇಳಿಯಲು ಬಿಟ್ಟಿರಲಿಲ್ಲ. 5ನೇ ದಿನದಾಟವು ಮಳೆಯಿಂದಾಗಿ ತಡವಾಗಿ ಆರಂಭಗೊಂಡಿದೆ.

ಮೊದಲ ಇನ್ನಿಂಗ್ಸ್ ಆಡುತ್ತಿರುವ ನ್ಯೂಜಿಲೆಂಡ್ 101 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದು, 116 ರನ್ಗಳಿಂದ ಹಿನ್ನಡೆಯಲ್ಲಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 217 ರನ್ಗೆ ಆಲೌಟ್ ಆಗಿತ್ತು. 31 ರನ್ ನೀಡಿ 5 ವಿಕೆಟ್ ಕಬಳಿಸಿದ್ದ ಕೈಲ್ ಜೆಮಿಸನ್ ಟೀಂ ಇಂಡಿಯಾದ ರನ್ ಗಳಿಕೆಯ ವೇಗಕ್ಕೆ ಮೂಗುದಾರ ಹಾಕಿದ್ದರು.

ಹ್ಯಾಂಪ್ಶೈರ್ ಬೌಲ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನವಿಡೀ ಮಳೆಯಿಂದಾಗಿ ರದ್ದಾಗಿತ್ತು. ನಂತರದ ಎರಡು ದಿನಗಳಲ್ಲಿ ಪದೇ ಪದೇ ಮಳೆ ಕಾಡಿತ್ತು. ಎರಡನೇ ದಿನ 64.4 ಓವರ್ಗಳ ಆಟ ನಡೆದಿದ್ದರೆ ಮೂರನೇ ದಿನ 76.3 ಓವರ್ಗಳನ್ನಷ್ಟೇ ಹಾಕಲು ಸಾಧ್ಯವಾಗಿತ್ತು. ಸೋಮವಾರ ಬೆಳಿಗ್ಗೆಯಿಂದಲೇ ಮಳೆ ಕಾಡಿತ್ತು. ನಾಲ್ಕೂವರೆ ತಾಸು ಕಾದು ಕುಳಿತ ನಂತರ ಸ್ಥಳೀಯ ಕಾಲ ಮೂರು ಗಂಟೆಗೆ ದಿನದಾಟವನ್ನು ಅಂಪೈರ್ಗಳು ರದ್ದುಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.