ಅಹಮದಾಬಾದ್: ವಿಶ್ವದ ದೊಡ್ಡ ಕ್ರಿಕೆಟ್ ಕ್ರೀಡಾಂಗಣಕ್ಕೆ ಬುಧವಾರ ಮರುನಾಮಕರಣ ಮಾಡಿದ ನಡೆಯು ಅಚ್ಚರಿಗೆ ಕಾರಣವಾಯಿತು.

ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಉದ್ಘಾಟನೆ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಮಫಲಕದ ಪರದೆ ಸರಿಸಿದಾಗ ಎಲ್ಲರಿಗೂ ಅಚ್ಚರಿಯಾಗಿತ್ತು. ಅದರಲ್ಲಿ ’ನರೇಂದ್ರ ಮೋದಿ ಸ್ಟೇಡಿಯಂ‘ ಪದಗಳು ಮಿನುಗಿದ್ದು ಆ ಅಚ್ಚರಿಗೆ ಕಾರಣ.

ಉದ್ಘಾಟನೆ ಸಮಾರಂಭದವರೆಗೂ ಈ ತಾಣವನ್ನು ಸರ್ದಾರ್ ಪಟೇಲ್ ಕ್ರೀಡಾಂಗಣವೆಂದೇ ಎಲ್ಲರೂ ಕರೆದಿದ್ದರು. ಆದರೆ ಈಗ ಪ್ರಧಾನಿ ಮೋದಿಯವರ ಹೆಸರು ಬಂದಿದೆ ಎಂದು ಗುಜರಾತ್ ಕ್ರಿಕೆಟ್ ಸಂಸ್ಥೆಯ ಕೆಲವು ಪದಾಧಿಕಾರಿಗಳೇ ಅಚ್ಚರಿ ವ್ಯಕ್ತಪಡಿಸಿದರು. ಉದ್ಘಾಟನಾ ನಾಮಫಲಕದಲ್ಲಿ ರಾಷ್ಟ್ರಪತಿ ಕೋವಿಂದ, ಗೃಹ ಸಚಿವ ಅಮಿತ್ ಶಾ, ಅವರ ಮಗ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ರಿಲಯನ್ಸ್ ಅಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಪರಿಮಲ್ ನತ್ವಾನಿ ಮತ್ತು ಅವರ ಮಗ, ಗುಜರಾತ್ ಕ್ರಿಕೆಟ್ ಸಂಸ್ಥೆ ಉಪಾಧ್ಕಕ್ಷ ಧನರಾಜ್, ಗುಜರಾತ್ನ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಹೆಸರುಗಳಿವೆ.

ಕ್ರೀಡಾಂಗಣದ ಗೇಟ್ –1 ರ ನೆತ್ತಿಯ ಮೇಲೆ ಇರುವ ದೊಡ್ಡ ಫಲಕದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ನರೇಂದ್ರ ಮೋದಿ ಸ್ಟೇಡಿಯಂ‘ ಎಂದು ಇಂಗ್ಲಿಷ್ನಲ್ಲಿ ಉಲ್ಲೇಖಿಸಲಾಗಿದೆ. ಈ ದ್ವಾರದ ಮೂಲಕ ಪ್ರೇಕ್ಷಕರು ದೊಡ್ಡ ಸಾಲಿನಲ್ಲಿ ಕ್ರೀಡಾಂಗಣ ಪ್ರವೇಶಿಸಿದರು.

ಉದ್ಘಾಟನಾ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ್, ’ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣವು ವಿಶ್ವದ ಅತಿ ದೊಡ್ಡ ಕ್ರಿಕೆಟ್ ತಾಣವಾಗಿರುವುದು ಹೆಮ್ಮೆಯ ಸಂಗತಿ. 1.32 ಲಕ್ಷ ಪ್ರೇಕ್ಷಕರಿಗೆ ಇಲ್ಲಿ ಸ್ಥಳಾವಕಾಶ ಇದೆ‘ ಎಂದರು.

’ಮೊಟೇರಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್ಕ್ಲೇವ್ ಮತ್ತು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅತ್ಯಾಧುನಿಕ ಕ್ರೀಡಾ ಸೌಲಭ್ಯಗಳು ಇವೆ. ಒಲಿಂಪಿಕ್ ಸೇರಿದಂತೆ ಎಲ್ಲ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ಆಯೋಜನೆಗೆ ಪ್ರಶಸ್ತ ತಾಣವಾಗಲಿದೆ. ಇದು ಭಾರತದ ಕ್ರೀಡಾನಗರಿಯಾಗಲಿದೆ‘ ಎಂದು ಅಮಿತ್ ಶಾ ಹೇಳಿದರು.

ಆದರೆ ಮರುನಾಮಕರಣದ ವಿಷಯವು ಕಾಂಗ್ರೆಸ್ ಪಕ್ಷವನ್ನು ಕೆರಳಿಸಿದೆ.

’ನಮ್ಮ ಪಕ್ಷವು ಅಹಮದಾಬಾದ್ ಕ್ರಿಕೆಟ್ ಕ್ರೀಡಾಂಗಣಕ್ಕೆ ಸರ್ದಾರ್ ಸಾಹೇಬ್ (ಸರ್ದಾರ್ ವಲ್ಲಭಭಾಯಿ ಪಟೇಲ್) ಹೆಸರನ್ನಿಟ್ಟಿತ್ತು. ಇದೀಗ ಅದನ್ನು ಬದಲಿಸಿ ನರೇಂದ್ರ ಮೋದಿ ಅವರ ಹೆಸರನ್ನು ಇಟ್ಟಿರುವುದು ಉದ್ಧಟತನವಾಗಿದೆ. ಇದು ಸರ್ದಾರ್ ಸಾಹೇಬರಿಗೆ ಮಾಡಿದ ಅವಮಾನವಾಗಿದೆ. ಇದನ್ನು ಗುಜರಾತ್ ಸಹಿಸುವುದಿಲ್ಲ‘ ಎಂದು ಗುಜರಾತ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಮಿತ್ ಚಾವಡಾ ಟ್ವೀಟ್ ಮಾಡಿದ್ದಾರೆ.

’2014ರಲ್ಲಿ ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿ ಮತ್ತು ಜಿಸಿಎ ಅಧ್ಯಕ್ಷರೂ ಆಗಿದ್ದರು. ಆ ಸಂದರ್ಭದಲ್ಲಿ ಇದ್ದ 25 ವರ್ಷಗಳಷ್ಟು ಹಳೆಯ ಮೊಟೇರಾ ಕ್ರೀಡಾಂಗಣವನ್ನು ನೆಲಸಮ ಮಾಡಿ ನೂತನ ಬೃಹತ್ ಕ್ರೀಡಾಂಗಣ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು‘ ಎಂದು ಈಚೆಗೆ ಜಿಸಿಎ ಪ್ರಕಟಣೆ ನೀಡಿತ್ತು.

ಹೋದ ವರ್ಷ ಇದೇ ದಿನ ಈ ಕ್ರೀಡಾಂಗಣದಲ್ಲಿ ’ನಮಸ್ತೆ ಟ್ರಂಪ್‘ ಕಾರ್ಯಕ್ರಮವನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಆಗ ಅಮೆರಿಕದ ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ಅದಾಗಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.