ನವದೆಹಲಿ: ಯುವರಾಜ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ತೀರ್ಮಾನಿಸಿದ್ದು ಬಿಸಿಸಿಐ ಅನುಮತಿಗೆ ಕಾಯುತ್ತಿದ್ದಾರೆ.ಬಿಸಿಸಿಐನಿಂದ ಅನುಮತಿ ಸಿಕ್ಕಿದರೆ ಮಾತ್ರ ಯುವಿ ನಿವೃತ್ತಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಎಂದರಿತು ಯುವಿ ಈ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಂತರರಾಷ್ಟ್ರೀಯ ಮತ್ತು ಫಸ್ಟ್ ಕ್ಲಾಸ್ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ಯುವರಾಜ್ ಯೋಚಿಸಿದ್ದಾರೆ. ಅವರು ಈ ಬಗ್ಗೆ ಬಿಸಿಸಿಐ ಜತೆ ಮಾತನಾಡಲಿದ್ದು, ಜಿಟಿ20 (ಕೆನಡಾ), ಐರ್ಲೆಂಡ್ ಮತ್ತು ಹಾಲೆಂಡ್‌ನಲ್ಲಿ ನಡೆಯಲಿರುವ ಯುರೊ ಟಿ20 ಸ್ಲ್ಯಾಮ್‌ನಲ್ಲಿ ಭಾಗವಹಿಸಲು ಅನುಮತಿಗಾಗಿ ಕಾಯುತ್ತಿದ್ದಾರೆ ಎಂದು ಬಿಸಿಸಿಐ ಮೂಲವೊಂದು ಹೇಳಿರುವುದಾಗಿ ಪಿಟಿಐ ಸುದ್ದಿಸಂಸ್ಥೆ ಭಾನುವಾರ ವರದಿ ಮಾಡಿದೆ.

ಈ ಋತುವಿನ ಐಪಿಎಲ್ ಪಂದ್ಯಾವಳಿಯಲ್ಲಿ ಯುವರಾಜ್ ಸಿಂಗ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡಿದ್ದರೂ ಗಮನ ಸೆಳೆಯುವ ಆಟ ಆಡಲಿಲ್ಲ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ಕ್ರಿಕೆಟ್ ತಂಡದಲ್ಲಿ ಯುವಿ ಪ್ರಧಾನ ಪಾತ್ರವಹಿಸಿದ್ದರು. ವಿಶ್ವಕಪ್ ನಂತರಕ್ಯಾನ್ಸರ್ ಬಾಧಿತರಾಗಿದ್ದ ಯುವಿ, ಚಿಕಿತ್ಸೆಯಿಂದ ಗುಣಮುಖರಾಗಿ ಮತ್ತೆ ಕ್ರಿಕೆಟ್‌ಗೆ ಮರಳಿದ್ದರು.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯುವಿ 40 ಟೆಸ್ಟ್ ಪಂದ್ಯ, 304 ಏಕದಿನ, 58 ಟಿ20 ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ 33.93 ಸರಾಸರಿಯೊಂದಿಗೆ 1900 ರನ್ ಗಳಿಸಿದ್ದಾರೆ ಇವರು. ಇದರಲ್ಲಿ 3 ಶತಕ ಮತ್ತು 11 ಅರ್ಧ ಶತಕ ಬಾರಿಸಿದ್ದಾರೆ.
ಏಕದಿನ ಪಂದ್ಯಗಳಲ್ಲಿ 36.55 ಸರಾಸರಿಯೊಂದಿಗೆ 8701 ರನ್ ( 14 ಶತಕ, 52 ಅರ್ಧಶತಕ) ಗಳಿಸಿದ್ದು, ಟಿ20ಯಲ್ಲಿ 28.02 ಸರಾಸರಿಯೊಂದಿಗೆ 1177 ರನ್ ಗಳಿಸಿದ್ದಾರೆ ಈ ಆಲ್‌ರೌಂಡರ್.
ಟೆಸ್ಟ್ ಪಂದ್ಯದಲ್ಲಿ 9, ಏಕದಿನದಲ್ಲಿ 111, ಟಿ20ಯಲ್ಲಿ 28 ವಿಕೆಟ್ ಗಳಿಸಿದ್ದ ಯುವರಾಜ್, ಟೆಸ್ಟ್ ಪಂದ್ಯಗಳಲ್ಲಿ 31, ಏಕದಿನ ಪಂದ್ಯಗಳಲ್ಲಿ 94 ಮತ್ತು ಟಿ20 ಪಂದ್ಯದಲ್ಲಿ 12 ಕ್ಯಾಚ್ ಹಿಡಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.