ಶಾರ್ಜಾ: ನಾಯಕ ಆ್ಯರನ್ ಫಿಂಚ್ (116; 135 ಎಸೆತ, 8ಬೌಂಡರಿ, 4ಸಿಕ್ಸರ್) ಅವರ ಶತಕದ ಬಲದಿಂದ ಆಸ್ಟ್ರೇಲಿಯಾ ತಂಡವು ಇಲ್ಲಿ ಆರಂಭವಾದ ಪಾಕಿಸ್ತಾನ ತಂಡದ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಗೆದ್ದಿತು.

ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ಹ್ಯಾರಿಸ್ ಸೊಹೈಲ್ (ಔಟಾಗದೆ 101) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 280 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡವು ಆರಂಭದಲ್ಲಿಯೇ ಉಸ್ಮಾನ್ ಖ್ವಾಜಾ ಅವರ ವಿಕೆಟ್ ಕಳೆದುಕೊಂಡಿತು. ಆದರೆ ಫಿಂಚ್ ಮತ್ತು ಶಾನ್ ಮಾರ್ಷ್ (ಔಟಾಗದೆ 91) ಎರಡನೇ ವಿಕೆಟ್‌ಗೆ 172 ರನ್ ಗಳಿಸಿದರು. ತಂಡವನ್ನು ಗೆಲುವಿನ ದಡ ಸೇರಿಸಿದರು.

ಆಸ್ಟ್ರೇಲಿಯಾ ತಂಡವು ಈಚೆಗೆ ಭಾರತದ ವಿರುದ್ಧ 3–2 ರಿಂದ ಸರಣಿ ಗೆದ್ದಿತ್ತು. ಈಗ ಪಾಕಿಸ್ತಾನ ಎದುರು ಐದು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದೆ. ಭಾನುವಾರ ಎರಡನೇ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 280 (ಮಸೂದ್ 40, ಹ್ಯಾರಿಸ್ ಸೊಹೈಲ್ ಔಟಾಗದೆ 101, ಉಮರ್ ಅಕ್ಮಲ್ 49, ಕೌಲ್ಟರ್ ನೈಲ್ 61ಕ್ಕೆ2, ನೇಥನ್ ಲಯನ್ 38ಕ್ಕೆ1): ಆಸ್ಟ್ರೇಲಿಯಾ: 49 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 281 (ಉಸ್ಮಾನ್ ಖ್ವಾಜಾ 24, ಆ್ಯರನ್ ಫಿಂಚ್ 116, ಶಾನ್ ಮಾರ್ಷ್ ಔಟಾಗದೆ 91, ಪೀಟರ್ ಹ್ಯಾಂಡ್ಸ್‌ಕಂಬ್ ಔಟಾಗದೆ 30) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 8 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.