ಬೆಂಗಳೂರು: ಮೊಹಮ್ಮದ್ ಅನಾಸ್ ವಿ.ಎಂ. ಗಳಿಸಿದ ಗೋಲಿನ ನೆರವಿನಿಂದ ರಾಯಲ್ಸ್ ಎಫ್‌ಸಿ ತಂಡವು ಬಿಡಿಎಫ್‌ಎ ಬಿ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಸಾಧಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿರಾಯಲ್ಸ್ 1–0ಯಿಂದ ಗೋವನ್ಸ್ ಎಫ್‌ಸಿ ಎದುರು ಗೆದ್ದಿತು. ಮೊಹಮ್ಮದ್ ಅನಾಸ್ 34ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಎ ಡಿವಿಷನ್ ಪಂದ್ಯದಲ್ಲಿ ಪರಿಕ್ರಮ ಎಫ್‌ಸಿ 1–0ಯಿಂದ ಸೌತ್ ಯುನೈಟೆಡ್ ತಂಡವನ್ನು ಸೋಲಿಸಿತು. ಜೆ. ರಿತಾಥ್ 53ನೇ ನಿಮಿಷದಲ್ಲಿ ವಿಜೇತ ತಂಡದ ಪರ ಕಾಲ್ಚಳಕ ತೋರಿದರು.

ಮತ್ತೊಂದು ಪಂದ್ಯದಲ್ಲಿ ಎಜಿಒಆರ್‌ಸಿ ಎಫ್‌ಸಿ 1–0ಯಿಂದ ಬ್ಲಿಟ್ಜ್ ಎಫ್‌ಸಿ ಎದುರು ಗೆದ್ದಿತು. ಬ್ಲಿಟ್ಜ್ ತಂಡದ ರಿತ್ವಿಕ್ ಕುಮಾರ್ 77ನೇ ನಿಮಿಷದಲ್ಲಿ ವಿಜೇತ ತಂಡಕ್ಕೆ ‘ಉಡುಗೊರೆ ಗೋಲು‘ ನೀಡಿದರು.

ಬುಧವಾರ ನಡೆಯಲಿರುವ ಎ ಡಿವಿಷನ್ ಪಂದ್ಯಗಳಲ್ಲಿ ಪೋಸ್ಟಲ್ ಡಿಪಾರ್ಟ್‌ಮೆಂಟ್ ಎಫ್‌ಸಿ– ಆರ್‌ಡಬ್ಲ್ಯುಎಫ್ ಎಫ್‌ಸಿ, ಬಿಟಿಎಂ ಎಫ್‌ಸಿ–ಫ್ರೆಂಡ್ಸ್ ಯುನೈಟೆಡ್ ಎಫ್‌ಸಿ, ಇನ್‌ಕಮ್ ಟ್ಯಾಕ್ಸ್ ಎಫ್‌ಸಿ– ಬೆಂಗಳೂರು ಗನ್ನರ್ಸ್ ಎಫ್‌ಸಿ, ಎಚ್‌ಎಎಲ್ ಎಫ್‌ಸಿ– ರೆಬೆಲ್ಸ್ ಎಫ್‌ಸಿ ನಡುವೆ ಸೆಣಸಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.