ಬೆಂಗಳೂರು: ಆತಿಥೇಯ ಬೆಂಗಳೂರು ಎಫ್ಸಿ ಮತ್ತು ನಾರ್ತ್ ಯುನೈಟೆಡ್ ತಂಡಗಳು ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯದಲ್ಲಿ ಶುಕ್ರವಾರ 2–2 ಗೋಲುಗಳಿಸಿ ಡ್ರಾ ಮಾಡಿಕೊಂಡವು.

ಪಂದ್ಯ ಡ್ರಾ ಆದರೂ ಅಂಕಪಟ್ಟಿಯಲ್ಲಿ ಬೆಂಗಳೂರು ಎಫ್ಸಿ ತಂಡ ಅಗ್ರಸ್ಥಾನದಲ್ಲೇ ಮುಂದುವರೆದಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ತೀವ್ರ ಪೈಪೋಟಿ ಕಂಡುಬಂತು. ಪಂದ್ಯದ ಎಂಟನೇ ನಿಮಿಷ ಅಜರಾಯಿ ಮೊದಲ ಗೋಲು ಹೊಡೆದು ನಾರ್ತ್ ಈಸ್ಟ್ ಯುನೈಟೆಡ್ ತಂಡಕ್ಕೆ ಮುನ್ನಡೆ ಒದಗಿಸಿದರು.

ಆದರೆ ಎರಡೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ತಂಡದ ನೊಗುಯೆರಾ ಗೋಲು ಹೊಡೆದು ಸ್ಕೋರ್ ಸಮಮಾಡಿಕೊಳ್ಳಲು ನೆರವಾದರು.

ನಾರ್ತ್ ಈಸ್ಟ್ ತಂಡಕ್ಕೆ 14ನೇ ನಿಮಿಷದಲ್ಲಿ ಅಜರಾಯಿ ಮತ್ತೊಂದು ಗೋಲು ಹೊಡೆದು ಮತ್ತೆ ಮುನ್ನಡೆ ನೀಡಿದರು.

ವಿರಾಮದ ವೇಳೆಗೆ ನಾರ್ತ್ಈಸ್ಟ್ ಯುನೈಟೆಡ್ 2–1 ಗೋಲುಗಳಿಂದ ಮುನ್ನಡೆ ಪಡೆದಿತ್ತು. ವಿರಾಮದ ನಂತರ ಬೆಂಗಳೂರು ಎಫ್ಸಿ ತಂಡದ ಶಿವಶಕ್ತಿ ಬದಲು ತಾರಾ ಆಟಗಾರ ಸುನಿಲ್ ಚೆಟ್ರಿ ಅವರನ್ನು ಕಣಕ್ಕಿಳಿಸಲಾಯಿತು. 70ನೇ ನಿಮಿಷ ಬೆಂಗಳೂರು ಎಫ್ಸಿ ತಂಡದ ರಿಯಾನ್ ವಿಲಿಯಮ್ಸ್ ಗೋಲು ಹೊಡೆದು ಸ್ಕೋರ್ ಸಮಗೊಳಿಸಿದರು. ನಂತರ ಪಂದ್ಯದ ಕೊನೆಯವರೆಗೂ ಎರಡೂ ತಂಡಗಳು ಮುನ್ನಡೆಗೆ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.