ಮಾಸ್ಕೊ: 21ನೇ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಹದಿನಾರರ ಹಂತದಲ್ಲಿ ಎರಡು ಬಾರಿಯ ಚಾಂಪಿಯನ್ ಉರುಗ್ವೆ ತಂಡವು ಪೋರ್ಚುಗಲ್‌ನ್ನು ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಫಿಶ್ತ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಹೋರಾಟದಲ್ಲಿ 2–1 ಗೋಲುಗಳ ಅಂತದಿಂದ ಉರುಗ್ವೆ ಗೆಲುವು ಸಾಧಿಸಿತು. ಮುಂಬರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್–ಉರುಗ್ವೆ ಮುಖಾಮುಖಿಯಾಗಲಿವೆ.

ಫುಟ್‌ಬಾಲ್ ಲೋಕದ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲೂಯಿಸ್ ಸ್ವಾರೆಜ್ ಅವರಿಂದ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಉರುಗ್ವೆಯ ಎಡಿನ್‌ಸನ್ ಕ್ಯಾವಾನಿ ಎರಡು ಗೋಲು ಗಳಿಸುವ ಮೂಲಕ ಅಂಗಳದಲ್ಲಿ ಮಿಂಚಿದರು.

ಪಂದ್ಯದ 7ನೇ ನಿಮಿಷ ಉರುಗ್ವೆ ಮೊದಲ ಗೋಲು ಗಳಿಸಿತು. 55ನೇ ನಿಮಿಷದಲ್ಲಿ ಪೆಪೆ ಗಳಿಸಿದ ಗೋಲಿನಿಂದ ಪೋರ್ಚುಗಲ್ ಸಮಬಲ ಸಾಧಿಸಿತು. ಆದರೆ, ಮುಂದಿನ ಏಳನೇ ನಿಮಿಷದಲ್ಲಿ ಕ್ಯಾವಾನಿ ತಳ್ಳಿದ ಚೆಂಡು ಮತ್ತೊಂದು ಗೋಲು ಗಳಿಸಿತು.

ಉರುಗ್ವೆ ನಡೆಸಿದ ರಕ್ಷಣಾತ್ಮಕ ಆಟದ ಕೋಟೆಯನ್ನು ಭೇದಿಸಿ ಮತ್ತೊಂದು ಗೋಲು ಗಳಿಸಲು ಪೋರ್ಚುಗಲ್ ಆಟಗಾರರಿಗೆ ಸಾಧ್ಯವಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.