ಸ್ಯಾಂಟಿಯಾಗೊ ಡೆಲ್ ಎಸ್ಟೆರೊ, ಅರ್ಜೆಂಟೀನಾ: ದಿಗ್ಗಜ ಆಟಗಾರ ಲಯೊನೆಲ್ ಮೆಸ್ಸಿ ಅವರು ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರ 100 ಗೋಲುಗಳ ಮೈಲುಗಲ್ಲು ತಲುಪಿದ ಸಾಧನೆ ಮಾಡಿದ್ದಾರೆ.

ಮಂಗಳವಾರ ಇಲ್ಲಿ ಕ್ಯುರಾಸಾವೊ ಎದುರು ನಡೆದ ಅಂತರರಾಷ್ಟ್ರೀಯ ಸ್ನೇಹಪರ ಪಂದ್ಯದಲ್ಲಿ ಹ್ಯಾಟ್ರಿಕ್ ಗಳಿಸುವುದರೊಂದಿಗೆ ಮೆಸ್ಸಿ ಈ ಸಾಧನೆ ಮಾಡಿದರು. ವಿಶ್ವಕಪ್ ವಿಜೇತ ಅರ್ಜೆಂಟೀನಾ ಈ ಪಂದ್ಯದಲ್ಲಿ 7–0 ಗೋಲುಗಳಿಂದ ಕ್ಯುರಾಸಾವೊ ತಂಡವನ್ನು ಪರಾಭವಗೊಳಿಸಿತು.

35 ವರ್ಷದ ಮೆಸ್ಸಿ ಪಂದ್ಯದ 20ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದರು. ಬಲಗಾಲಿನಿಂದ ಕಿಕ್ ಮಾಡಿ ಚೆಂಡನ್ನು ಗುರಿ ಸೇರಿಸಿದ ಅವರು 100 ಗೋಲುಗಳ ಮೈಲುಗಲ್ಲು ತಲುಪಿದರು. ಬಳಿಕ 33 ಮತ್ತು 37ನೇ ನಿಮಿಷಗಳಲ್ಲಿ ಗೋಲು ಗಳಿಸಿ ತಮ್ಮ ಒಟ್ಟು ಗೋಲು ಗಳಿಕೆಯನ್ನು 102ಕ್ಕೆ ಹೆಚ್ಚಿಸಿಕೊಂಡರು.

ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (122) ಮತ್ತು ಇರಾನ್ ಅಲಿ ದಯಿ (109) ರಾಷ್ಟ್ರೀಯ ತಂಡದ ಪರ 100ಕ್ಕಿಂತ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿರುವ ಇನ್ನಿಬ್ಬರು ಆಟಗಾರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.